ನವದೆಹಲಿ, ಏ.27 (DaijiworldNews/HR): "ಆಕ್ಸಿಜನ್ ಪೂರೈಕೆಯಲ್ಲಿ ಸಾಕಷ್ಟು ಸುಧಾರಣೆ ಕಂಡು ಬಂದಿದ್ದು, ರಾಜಧಾನಿಯಲ್ಲಿ ವೈದ್ಯಕೀಯ ಆಮ್ಲಜನಕದ ಪರಿಸ್ಥಿತಿ ಸುಧಾರಿಸಿದೆ" ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೆಹಲಿ ಸರ್ಕಾರವು ಥೈಲ್ಯಾಂಡ್ನ ಬ್ಯಾಂಕ್ನಿಂದ 18 ಆಮ್ಲಜನಕ ಟ್ಯಾಂಕರ್ಗಳನ್ನು ಆಮದು ಮಾಡಲು ನಿರ್ಧರಿಸಿದ್ದು, ಅದು ನಾಳೆಯಿಂದ ಬರಲು ಪ್ರಾರಂಭವಾಗುತ್ತದೆ. ಇದಕ್ಕಾಗಿ ವಾಯುಪಡೆಯ ವಿಮಾನಗಳ ಬಳಕೆಗೆ ಅನುಮತಿ ನೀಡುವಂತೆ ನಾವು ಕೇಂದ್ರವನ್ನು ಕೋರಿದ್ದೇವೆ. ಮಾತುಕತೆ ನಡೆಯುತ್ತಿದೆ, ಮಾತುಕತೆ ಯಶಸ್ವಿಯಾಗಲಿದೆ ಎಂದು ನಾನು ತುಂಬಾ ಆಶಿಸುತ್ತೇನೆ" ಎಂದರು.
ರಾಜ್ಯ ಸರ್ಕಾರವು ಫ್ರಾನ್ಸ್ನಿಂದ 21 ಸಿದ್ಧ ಆಮ್ಲಜನಕ ಸ್ಥಾವರಗಳನ್ನು ಆಮದು ಮಾಡಿಕೊಳ್ಳುತ್ತಿದ್ದು, ಅದನ್ನು ತಕ್ಷಣವೇ ಬಳಕೆಗೆ ತರಬಹುದು. ಇವುಗಳನ್ನು ವಿವಿಧ ಆಸ್ಪತ್ರೆಗಳಲ್ಲಿ ಅಳವಡಿಸಲಾಗುವುದು ಮತ್ತು ಆ ಆಸ್ಪತ್ರೆಗಳಲ್ಲಿನ ಆಮ್ಲಜನಕದ ಬಿಕ್ಕಟ್ಟನ್ನು ಪರಿಹರಿಸಲು ಇದು ನಮಗೆ ಸಹಾಯ ಮಾಡುತ್ತದೆ" ಎಂದಿದ್ದಾರೆ.
ಮುಂದಿನ ಒಂದು ತಿಂಗಳಲ್ಲಿ ದೆಹಲಿಯಲ್ಲಿ 44 ಆಮ್ಲಜನಕ ಸ್ಥಾವರಗಳನ್ನು ಸ್ಥಾಪಿಸಲಿದ್ದು, ಇವುಗಳಲ್ಲಿ 8 ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ. ಉಳಿದ 36 ದೆಹಲಿ ಸರ್ಕಾರ, ಫ್ರಾನ್ಸ್ನಿಂದ ಬರುವ 21 ಸ್ಥಾವರಗಳು ಮತ್ತು ದೇಶದೊಳಗಿನ 15 ಸ್ಥಾವರಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಇನ್ನು ದೆಹಲಿಗೆ ಸಹಾಯ ಮಾಡಿದ್ದಕ್ಕಾಗಿ ನಾನು ಕೇಂದ್ರಕ್ಕೆ ಧನ್ಯವಾದ ಹೇಳಲು ಬಯಸುತ್ತೇನೆ. ಬಹಳಷ್ಟು ವ್ಯಕ್ತಿಗಳು ಮತ್ತು ಸರ್ಕಾರಗಳು ನಮಗೆ ಸಹಾಯ ಮಾಡುತ್ತಿವೆ. ಅವರೆಲ್ಲರಿಗೂ ಧನ್ಯವಾದಗಳು" ಎಂದಿದ್ದಾರೆ.