ಚಿಕ್ಕಮಗಳೂರು, ಏ.27 (DaijiworldNews/MB) : ''ಮೋದಿ ಜಾಗದಲ್ಲಿ ಬೇರೊಬ್ಬರನ್ನು ಕಲ್ಪಿಸಲೂ ಕೂಡಾ ಆಗದು'' ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
ಚಿಕ್ಕಮಗಳೂರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ನಾವು ಮೋದಿ ಜಾಗದಲ್ಲಿ ಬೇರೊಬ್ಬರನ್ನು ಕಲ್ಪಿಸಲೂ ಸಾಧ್ಯವಾಗದು. ನಾವು ಹಾಗೆ ಕಲ್ಪನೆ ಮಾಡಿದರೆ ಇಂದಿನ ಸ್ಥಿತಿ ಇನ್ನಷ್ಟು ಗಂಭೀರವಾಗಿರುತ್ತಿತ್ತು'' ಎಂದು ಅಭಿಪ್ರಾಯ ಪಟ್ಟರು.
''ವಿಪಕ್ಷದವರು ಕೊರೊನಾ ವಿಚಾರದಲ್ಲೂ ರಾಜಕೀಯ ಮಾಡುತ್ತಿದ್ದಾರೆ. ಆದರೆ ಇದು ರಾಜಕೀಯ ಮಾಡುವ ಸಮಯವಲ್ಲ. ಇದು ನಾವು ಒಂದಾಗಿ ಕರ್ತವ್ಯ ನಿರ್ವಹಣೆ ಮಾಡಬೇಕಾದ ಸಮಯ'' ಎಂದು ಹೇಳಿದರು.
ಇನ್ನು ಈ ಸಂದರ್ಭದಲ್ಲೇ ಸಿದ್ದರಾಮಯ್ಯನವರ ವಿರುದ್ದ ವಾಗ್ದಾಳಿ ನಡೆಸಿದ ರವಿ, ''ಸಭೆಯನ್ನು ರಾಜ್ಯಪಾಲರು ಕರೆದರೆ ಸಂವಿಧಾನಿಕ ಅಧಿಕಾರ ಇಲ್ಲ ಎಂದು ಹೇಳುತ್ತೀರಿ. ಪ್ರಧಾನಿ ಮೋದಿ ಸಭೆ ಕರೆದರೆ ಅವರೇನು ಹೆಡ್ ಮಾಸ್ತರಾ ಎಂದು ಕೇಳುತ್ತೀರಿ. ನಿಮ್ಮ ತಲೆಗೆ ಏನಾಗಿದೆ'' ಎಂದು ಟೀಕಿಸಿದರು.