ಪಣಜಿ, ಏ.27 (DaijiworldNews/HR): 'ತೆಹೆಲ್ಕಾ' ಪತ್ರಿಕೆಯ ಸಂಪಾದಕ ತರುಣ್ ತೇಜ್ಪಾಲ್ ಅವರ ವಿರುದ್ದದ ಲೈಂಗಿಕ ಕಿರುಕುಳ ಪ್ರಕರಣದ ತೀರ್ಪು ಮೇ 12 ರಂದು ಪ್ರಕಟಿಸಲಾಗುವುದು ಎಂದು ಗೋವಾ ಸೆಷನ್ ಕೋರ್ಟ್ ತಿಳಿಸಿದೆ.
ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಇಂದು ತೀರ್ಪು ಪ್ರಕಟಿಸಬೇಕಿತ್ತು, ಆದರೆ ನ್ಯಾಯಾಧೀಶೆ ಕ್ಷಮಾ ಜೋಶಿ ಅವರು ತೀರ್ಪನ್ನು ಮೇ 12 ಕ್ಕೆ ಪ್ರಕಟಿಸುವುದು ಎಂದು ಹೇಳಿದ್ದಾರೆ.
ಇನ್ನು ಸರ್ಕಾರದ ಪರ ವಕೀಲ ಫ್ರಾನ್ಸಿಸ್ಕೊ ಟವರೆಸ್ ಪ್ರತಿಕ್ರಿಯೆ ನೀಡಿ, "ಯಾವ ಕಾರಣವನ್ನೂ ನೀಡದೇ ನ್ಯಾಯಾಧೀಶರು ತೀರ್ಪನ್ನು ಮುಂದೂಡಿದ್ದಾರೆ" ಎಂದರು.
ತರುಣ್ ತೇಜ್ಪಾಲ್ 2013 ನವೆಂಬರ್ ತಿಂಗಳಿನಲ್ಲಿ ಥಿಂಕ್ ಫೆಸ್ಟ್ ಕಾರ್ಯಕ್ರಮದ ವೇಳೆ ಲೈಂಗಿಕ ದೌರ್ಜನ್ಯವೆಸಗಿದ್ದರು ಎಂದು ಅದೇ ಸಂಸ್ಥೆಯ ಸಹೋದ್ಯೋಗಿಯೊಬ್ಬರು ಆರೋಪಿಸಿ ಸಂತ್ರಸ್ತೆ ದೂರು ನೀಡಿದ್ದರು.
ಇನ್ನು ಈ ಬಗ್ಗೆ 2013ರಲ್ಲಿ ತರುಣ್ ತೇಜ್ಪಾಲ್ ವಿರುದ್ಧ ದೂರು ದಾಖಲಾಗಿದ್ದು, ಪ್ರಕರಣದ ವಿಚಾರಣೆ ಕಳೆದ ಮಾರ್ಚ್ನಲ್ಲಿ ಮುಕ್ತಾಯಗೊಂಡಿದ್ದು, ತೀರ್ಪನ್ನು ಏಪ್ರಿಲ್ 27ಕ್ಕೆ ಪ್ರಕಟಿಸುವುದಾಗಿ ನ್ಯಾಯಾಲಯ ತಿಳಿಸಿತ್ತು.