ಮಧ್ಯಪ್ರದೇಶ, ಏ.27 (DaijiworldNews/HR): ಮಧ್ಯಪ್ರದೇಶದ ರತ್ಲಮ್ನಲ್ಲಿ ವರನಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ವಧು ಮತ್ತು ವರ ಇಬ್ಬರೂ ಪಿಪಿಇ ಕಿಟ್ ಧರಿಸಿ ಮದುವೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ವಧು -ವರರು ಪಿಪಿಇ ಕಿಟ್ ಧರಿಸಿ ವಿವಾಹವಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಾಂಪ್ರದಾಯಿಕ ಉಡುಪುಗಳನ್ನು ಧರಿಸದೇ ಕೇವಲ ಪಿಪಿಇ ಕಿಟ್ ಧರಿಸಿ ಈ ಜೋಡಿ ಮದುವೆಯಾಗಿದ್ದಾರೆ.
ಏಪ್ರಿಲ್ 19ರಂದು ವರನಿಗೆ ಕೊರೊನಾ ಸೋಂಕು ತಗುಲಿದ್ದ ಕಾರಣ ಮದುವೆಯನ್ನು ಮುಂದೂಡಲು ಆಗಲಿಲ್ಲ, ಇದೇ ಹಿನ್ನೆಲೆಯಲ್ಲಿ ಸ್ಥಳೀಯ ಹಿರಿಯ ಅಧಿಕಾರಿಗಳ ಅನುಮತಿ ಪಡೆದ ಈ ಜೋಡಿ, ಮದುವೆಯಾಗಿದೆ ಎಂದು ತಿಳಿದು ಬಂದಿದೆ.
ಇನ್ನು ಪಿಪಿಇ ಕಿಟ್ ಧರಿಸಿ, ಕೊರೊನಾ ಮುನ್ನೆಚ್ಚರಿಕಾ ಕ್ರಮದೊಂದಿಗೆ ಮದುವೆಯಾಗುವಂತೆ ಅಧಿಕಾರಿಗಳು ಷರತ್ತು ವಿಧಿಸಿದ್ದ ಕಾರಣ ನಾವು ಈ ರೀತಿ ಮದುವೆಯಾಗಬೇಕಾಯಿತು ಎಂದು ನವ ಜೋಡಿಗಳು ತಿಳಿಸಿದ್ದಾರೆ.