ನವದೆಹಲಿ, ಏ 27 (DaijiworldNews/MS): ಪ್ರಧಾನಿ ನರೇಂದ್ರ ಮೋದಿಯೂ ಲಾಕ್ಡೌನ್ ಮುಕ್ತಗೊಳಿಸಿ ಭಾರತವನ್ನು ಸರ್ವನಾಶದತ್ತ ದೂಡುತ್ತಿದ್ದಾರೆ ಎಂಬ ಆಸ್ಟ್ರೇಲಿಯನ್ ಪತ್ರಿಕೆಯಾದ ದಿ ಆಸ್ಟ್ರಿಯನ್ನಲ್ಲಿ ಪ್ರಕಟವಾದ ಸುದ್ದಿಯನ್ನು ಭಾರತೀಯ ಹೈಕಮಿಷನ್ ದುರುದ್ದೇಶಪೂರಿತ , ಆಧಾರರಹಿತ ವರದಿ ಎಂದು ಕರೆದಿದೆ.
ಏಪ್ರಿಲ್ 25ರಂದು ಪ್ರಕಟವಾದ ವರದಿಯಲ್ಲಿ, ಪ್ರಧಾನಿ ತೆಗೆದುಕೊಂಡ ಕೆಲವು ನಿರ್ಣಯಗಳಿಂದ ಭಾರತ ದೇಶಕ್ಕೆ ಈ ಪರಿಸ್ಥಿತಿಗೆ ಬಂದಿದೆ, ಭಾರತ ಸರ್ಕಾರವು ಕೊರೊನಾ ಎರಡನೇ ಅಲೆಯನ್ನು ಗಂಭೀರವಾಗಿ ಪರಿಗಣಿಸದೆ, ಚುನಾವಣಾ ಮೆರವಣಿಗೆ, ಕುಂಭಮೇಳವನ್ನು ನಡೆಸಿ ಮತ್ತಷ್ಟು ಸೋಂಕನ್ನು ಹೆಚ್ಚಿಸಲು ಕಾರಣವಾಗಿದೆ. ತಜ್ಞರ ಸಲಹೆ ಧಿಕ್ಕರಿಸಿದ ಕಾರಣ ಹೇಗೆ ಪರಿಸ್ಥಿತಿ ಕೈಮೀರಿ ಹೋಯಿತು ನೋಡಿ ಎಂದು ವ್ಯಂಗ್ಯವಾಡಿತ್ತು.
ಇದರ ವಿರುದ್ದ ದ್ವನಿ ಎತ್ತಿರುವ ಭಾರತೀಯ ಹೈಕಮಿಷನ್ ಇದನ್ನು ಆಧಾರರಹಿತ ವರದಿ, ದುರುದ್ದೇಶಪೂರಿತ ಎಂದು ಹೇಳಿದ್ದು ಆಸ್ಟ್ರೇಲಿಯಾದ ದಿ ಆಸ್ಟ್ರಿಯನ್ ಪತ್ರಿಕೆ ಸುಳ್ಳು ಸುದ್ದಿ ಹರಡುತ್ತಿವೆ ಎಂದು ಹೇಳಿದೆ. ಮಾತ್ರವಲ್ಲದೆ ನಿರಾಧಾರ ಲೇಖವನ್ನು ಪ್ರಕಟಿಸುವುದನ್ನು ತಡೆಯಬೇಕು ಎಂದು ಒತ್ತಾಯಿಸಲಾಗಿದೆ.
ಭಾರತೀಯ ಹೈಕಮಿಷನ್ ದಿ ಆಸ್ಟ್ರಿಯನ್ ಸಂಪಾದಕರಿಗೆ ಪತ್ರ ಬರೆದಿದ್ದು, ಸರ್ಕಾರವು ಸರಿಯಾದ ಸಮಯದಲ್ಲಿ ತೆಗೆದುಕೊಂಡ ಕ್ಲಪ್ತ ನಿರ್ಧಾರಗಳಿಂದ ಕೋಟ್ಯಂತರ ಜನರ ಪ್ರಾಣ ಉಳಿದಿದೆ. ಭಾರತದಲ್ಲಿ ಪ್ರತಿಯೊಬ್ಬರಿಗೂ ಲಸಿಕೆ ನೀಡಲಾಗುತ್ತಿದ್ದು, ಅದರಿಂದ ಲಕ್ಷಾಂತರ ಮಂದಿಯ ಪ್ರಾಣ ಉಳಿಸಲಾಗುತ್ತಿದೆ. ಈ ಪತ್ರಿಕೆಯ ವರದಿ ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದೆ.