ನವದೆಹಲಿ, ಏ.27 (DaijiworldNews/HR): ಭೂಗತ ಪಾತಕಿ ಛೋಟಾ ರಾಜನ್ಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸದ್ಯ ಅವರನ್ನು ತಿಹಾರ್ ಜೈಲಿನಿಂದ ಏಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸ್ಥಳಾಂತರ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಛೋಟಾ ರಜನ್ ತಿಹಾರ್ ಜೈಲಿನದ್ದು, ಈ ವೇಳೆ ಕೊರೊನಾ ಸೋಂಕು ತಗುಲಿದೆ. ಬಳಿಕ ಅವರನ್ನು ಪರೀಕ್ಷೆ ನಡೆಸಿದಾಗ ಪಾಸಿಟಿವ್ ಇರುವುದು ತಿಳಿಸಿದೆ.
ಸದ್ಯ ಅವರ ಸ್ಥಿತಿ ಗಂಭೀರವಾಗಿದ್ದು ಚಿಕಿತ್ಸೆ ನೀಡಲು ಏಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ವರದಿಯಾಗಿದೆ.
2015 ರಲ್ಲಿ ನಂದು ವಾಜೆಕರ್ ಎಂಬ ಬಿಲ್ಡರ್ ಪುಣೆಯಲ್ಲಿ ಜಮೀನು ಖರೀದಿಸಿದ್ದು, ಪರಮಾನಂದ ಠಕ್ಕರ್ ಎಂಬ ಏಜೆಂಟನಿಗೆ 2 ಕೋಟಿ ಕೊಡಬೇಕಾಗಿತ್ತು. ಈ ವಿಚಾರವಾಗಿ ಪರಮಾನಂದ ಠಕ್ಕರ್ ಹೆಚ್ಚಿನ ಹಣವನ್ನು ಬೇಡಿಕೆಯಿಟ್ಟಿದ್ದು, ಈ ಬೇಡಿಕೆಗೆ ವಾಜೇಕರ್ ಒಪ್ಪಿರಲಿಲ್ಲ. ನಂತರ ಪರಮಾನಂದ ಠಕ್ಕರ್ ಛೋಟಾ ರಾಜನ್ ನನ್ನು ಸಂಪರ್ಕಿಸಿ ಡೀಲ್ ಮಾಡುವಂತೆ ಹೇಳಿದ್ದು, ಬಳಿಕ್ ಛೋಟಾ ರಾಜನ್ ಬಿಲ್ಡರ್ ನಂದು ವಾಜೆಕರ್ಗೆ 26 ಕೋಟಿ ರೂಪಾಯಿ ನೀಡುವಂತೆ ಬೆದರಿಕೆ ಹಾಕಿದ್ದು, ಇದಕ್ಕೆ ಒಪ್ಪದಿದ್ದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದನು. ಈ ಸಂಬಂಧ ಛೋಟಾ ರಾಜನ್ ವಿರುದ್ಧ ಪ್ರಕರಣ ದಾಖಲಾಗಿತ್ತು.
ಇನ್ನು 2015ರಲ್ಲಿ ಇಂಡೋನೇಷ್ಯಾದ ಬಾಲಿ ಪೊಲೀಸರು ಛೋಟಾ ರಾಜನ್ನನ್ನು ಭಾರತಕ್ಕೆ ಹಸ್ತಾಂತರಿಸಿದದು, ಆಗಿನಿಂದ ರಾಜನ್ ತಿಹಾರ್ ಜೈಲಿನಲ್ಲಿದ್ದಾನೆ.