ಬೆಂಗಳೂರು, ಏ. 26 (DaijiworldNews/SM): ರಾಜ್ಯದಲ್ಲಿ ಕೊರೋನಾ ನಿಯಂತ್ರಿಸುವ ಹಿನ್ನೆಲೆಯಲ್ಲಿ ಮಂಗಳವಾರದಿಂದ ಟಫ್ ರೂಲ್ಸ್ ಹಿನ್ನೆಲೆಯಲ್ಲಿ ಹೊಸ ಮಾರ್ಗಸೂಚಿ ಪ್ರಕಟಿಸಲಾಗಿದೆ. ನಾಳೆ ರಾತ್ರಿಯಿಂದಲೇ ಹೊಸ ಮಾರ್ಗಸೂಚಿ ಜಾರಿಗೆ ಬರಲಿದೆ.
ಮದುವೆ ಸಮಾರಂಭಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಆದರೆ, ಕಡ್ಡಾಯ ನಿಯಮ ಪಾಲನೆಯೊಂದಿಗೆ 50 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ.
ಮಂದಿರ, ಮಸೀದಿ, ಚರ್ಚ್ ಗಳಲ್ಲಿ ಸಾರ್ವಜನಿಕ ಭೇಟಿ ನಿಷೇಧ. ನಿತ್ಯದ ಪ್ರಾರ್ಥನೆಗೆ ಮಾತ್ರ ಅವಕಾಶ.
ಹೊಟೇಲ್, ರೆಸ್ಟೋರೆಂಟ್ ಗಳಲ್ಲಿ ಪಾರ್ಸೆಲ್ ಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಇವುಗಳಲ್ಲಿ ಕಿಚನ್(ಅಡುಗೆ ಕೋಣೆ) ಕಾರ್ಯಾಚರಣೆಗೆ ಅವಕಾಶ ಮಾಡಿಕೊಡಲಾಗಿದ್ದು, ಹೋಂ ಡೆಲಿವರಿಗೆ ಅವಕಾಶವಿದೆ.
ನಾಳೆಯಿಂದ ಶಾಲೆ ಕಾಲೇಜುಗಳು ಸಂಪೂರ್ಣ ಬಂದ್ ಇರಲಿವೆ.
ಮೆಟ್ರೋ, ಆಟೋ, ಟ್ಯಾಕ್ಸಿ ಸಂಚಾರ ಸಂಪೂರ್ಣ ಬಂದ್ ಇರಲಿದೆ.
ರೈಲುಗಳು, ವಿಮಾನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
ರೈಲ್ವೇ ನಿಲ್ದಾಣ, ವಿಮಾನ ನಿಲ್ದಾಣಗಳಿಗೆ ಟ್ಯಾಕ್ಸಿ/ ಕ್ಯಾಬ್ ಗಳಲ್ಲಿ ಅಧಿಕೃತ ಟಿಕೆಟ್ ತೋರಿಸಿ ಸಂಚರಿಸಲು ಅವಕಾಶವಿದೆ.
ಅಂತರಾಜ್ಯ ಪ್ರಯಾಣವನ್ನು ನಿಷೇಧಿಸಲಾಗಿದೆ. ಅತ್ಯಂತ ತುರ್ತು ಸೇವೆಗಷ್ಟೇ ಅವಕಾಶ ಕಲ್ಪಿಸಲಾಗಿದೆ.
ಸಿನಿಮಾ, ಶಾಪಿಂಗ್ ಮಾಲ್ ಗಳು, ಜಿಮ್, ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಗಳು, ಕ್ರೀಡಾಂಗಣ, ಸ್ವಿಮ್ಮಿಂಗ್ ಫೂಲ್, ಮನೋರಂಜನಾ ಪಾರ್ಕ್ ಗಳು, ಕ್ಲಬ್ ಗಳು, ಚಿತ್ರಮಂದಿರ, ಬಾರ್, ಅಡಿಟೋರಿಯಂ ಕಂಪ್ಲೀಟ್ ಬಂದ್ ಆಗಿರಲಿವೆ.
ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಕಾರ್ಯಕ್ರಮಗಳಿಗೆ ಅವಕಾಶ ಇಲ್ಲ.
ಮದ್ಯದಂಗಡಿಗಳಲ್ಲಿ ಬೆಳಗ್ಗೆ 6-10ರ ತನಕ ಕೇವಲ ಪಾರ್ಸೆಲ್ ಗೆ ಮಾತ್ರ ಅವಕಾಶ ಇರಲಿದೆ.
ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ, ಧಾರ್ಮಿಕ ಕಾರ್ಯಕ್ರಮ ಕ್ರೀಡೆ ನಿಷೇಧ.
ಆಸ್ಪತ್ರೆಗಳು, ಮೆಡಿಕಲ್, ನರ್ಸಿಂಗ್ ಹೋಂ, ಕ್ಲೀನಿಕ್ ಗಳು, ಲ್ಯಾಬ್ ಗಳು, ಬ್ಲಡ್ ಬ್ಯಾಂಕ್ ಎಂದಿನಂತೆ ಕಾರ್ಯಾಚರಿಸಲಿವೆ.
ಪ್ಯಾರಾ ಮೆಡಿಕಲ್ ಹಾಗೂ ರಿಸರ್ಚ್ ಲ್ಯಾಬ್ ಗಳು ಓಪನ್ ಇರಲಿವೆ.
ಜೌಷಧ ತಯಾರಿಸುವ ಘಟಕ ಕಾರ್ಯಾಚರಣೆಗೂ ಅನುಮತಿ ನೀಡಲಾಗಿದೆ.
ವೈದ್ಯರು, ನರ್ಸ್ ಗಳು, ವಿಜ್ಞಾನಿಗಳು, ಲ್ಯಾಬ್ ಟೆಕ್ನೀಶಿಯನ್ಸ್, ಹಾಗೂ ಆಸ್ಪತ್ರೆ ಸಂಬಂಧಿಸಿದ ನೌಕರರ ಸಂಚಾರಕ್ಕೆ ಅವಕಾಶ.
ಪೊಲೀಸ್, ಹೋಂಗಾರ್ಡ್, ಫಯರ್ ಹಾಗೂ ತುರ್ತು ಸೇವೆ, ಜಿಲ್ಲಾ ಹಾಗೂ ತಾಲೂಕು ಕಚೇರಿಗಳ ಕಾರ್ಯಾಚರಣೆಗೆ ಅವಕಾಶ.
ಕೃಷಿ ಸಂಬಂಧಿಸಿದ ಚಟುವಟಿಕೆಗಳನ್ನು ನಡೆಸಲು ಅವಕಾಶ ಕಲ್ಪಿಸಲಾಗಿದೆ. ಇವುಗಳಿಗೆ ಸಂಬಂಧಿಸಿದ ಅಂಗಡಿಗಳಿಗೆ ಹಾಗೂ ದಾಸ್ತಾನು ಕೇಂದ್ರಗಳಿಗೆ ವಿನಾಯಿತಿ ನೀಡಲಾಗಿದೆ.
ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳು ನೀಡಿರುವ ನಿರ್ದೇಶನಗಳಂತೆ ಕೋರ್ಟ್ ಹಾಗೂ ಅವುಗಳಿಗೆ ಸಂಬಂಧಿಸಿದ ಕಚೇರಿಗಳು ತೆರೆಯಲು ಅವಕಾಶ ಕಲ್ಪಿಸಲಾಗಿದೆ.
ಬ್ಯಾಂಕ್ ಗಳು, ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಕನಿಷ್ಠ ನೌಕರರನ್ನು ಬಳಸಿ ಕಾರ್ಯ ನಿರ್ವಹಿಸಲು ಅವಕಾಶ.
ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ಮಾಡುವುದಕ್ಕೆ ಉತ್ತೇಜನ ನೀಡುವಂತೆ ಸೂಚನೆ.