ಬೆಂಗಳೂರು, ಏ. 26 (DaijiworldNews/SM): ಸ್ಯಾಂಡಲ್ ವುಡ್ ನ ಕೋಟಿ ನಿರ್ಮಾಪಕ ಎಂದೇ ಹೆಸರುವಾಸಿಯಾಗಿದ್ದ ಹಿರಿಯ ನಟಿ ಮಾಲಾಶ್ರೀಯವರ ಪತಿ ನಿರ್ಮಾಪಕ ರಾಮು ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ.
ಕಳೆದ ಏ. 8ರಂದು ಅನಾರೋಗ್ಯದ ಹಿನ್ನೆಲೆ ರಾಮು ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದ ಒಂದು ವಾರದಿಂದ ಅನಾರೋಗ್ಯ ತೀವ್ರ ಉಲ್ಬಣಗೊಂಡಿತ್ತು. ತೀವ್ರ ಉಸಿರಾಟದ ಸಮಸ್ಯೆಯಿಂದ ರಾಮು ಬಳಲುತ್ತಿದ್ದರು. ನಿರಂತರವಾಗಿ ಚಿಕಿತ್ಸೆ ಮುಂದುವರೆಸಲಾಗಿತ್ತು. ಆದರೆ, ಇಂದು ನಿರ್ಮಾಪಕ ರಾಮು ಅವರು ಚಿಕಿತ್ಸೆ ಫಲಕಾರಿಯಾಗಿ ಮೃತಪಟ್ಟಿದ್ದಾರೆ.