ಬೆಂಗಳೂರು, ಎ.26 (DaijiworldNews/PY): "ಉಚಿತ ಲಸಿಕೆಯ ನಡುವೆಯೂ ನಕಲಿ ಗಾಂಧಿ ಕುಟುಂಬವೇಕೆ ಲಸಿಕೆ ತೆಗೆದುಕೊಂಡಿಲ್ಲ!?. ಕಾಂಗ್ರೆಸ್ ನಾಯಕರಿಗೆ ಸಾಮಾಜಿಕ ಬದ್ಧತೆ ಎಂಬುದಿಲ್ಲವೇ?" ಎಂದು ಬಿಜೆಪಿ ಕಾಂಗ್ರೆಸ್ ಅನ್ನು ಪ್ರಶ್ನಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, "ನಿಜಕ್ಕೂ ಈಗ ಕಾಂಗ್ರೆಸ್ ಗೊಂದಲದಲ್ಲಿದೆ. ಆರಂಭದಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ಸೇರಿದಂತೆ ಹಲವಾರು ಕಾಂಗ್ರೆಸ್ ನಾಯಕರು ಕೋವಿಡ್ ಲಸಿಕೆಯ ಬಗ್ಗೆ ಅವಿಶ್ವಾಸ ವ್ಯಕ್ತಪಡಿಸಿದ್ದರು. ಅದೇ ಪಕ್ಷದ ನಕಲಿ ಗಾಂಧಿ ರಾಹುಲ್ ಅವರು ಇಂದು ಎಲ್ಲರಿಗೂ ಉಚಿತ ಲಸಿಕೆ ನೀಡಿ ಎಂದು ನಕಲಿ ಕಳಕಳಿ ವ್ಯಕ್ತಪಡಿಸುತ್ತಿದ್ದಾರೆ" ಎಂದು ಹೇಳಿದೆ.
"ಮೋದಿ ಸರ್ಕಾರ 45 ವರ್ಷ ಮೇಲ್ಪಟ್ಟವರಿಗೆ ಉಚಿತ ಕೋವಿಡ್ ಲಸಿಕೆ ನೀಡುತ್ತಿದೆ. ಬಿಎಸ್ವೈ ಸರ್ಕಾರ 18 ರಿಂದ 45 ವರ್ಷ ವಯೋಮಾನದವರಿಗೆ ಉಚಿತ ಲಸಿಕೆ ನೀಡುತ್ತಿದೆ. ಉಚಿತ ಲಸಿಕೆಯ ನಡುವೆಯೂ ನಕಲಿ ಗಾಂಧಿ ಕುಟುಂಬವೇಕೆ ಲಸಿಕೆ ತೆಗೆದುಕೊಂಡಿಲ್ಲ!?. ಕಾಂಗ್ರೆಸ್ ನಾಯಕರಿಗೆ ಸಾಮಾಜಿಕ ಬದ್ಧತೆ ಎಂಬುದಿಲ್ಲವೇ?" ಎಂದು ಪ್ರಶ್ನಿಸಿದೆ.
"ಸರ್ವಪಕ್ಷಗಳ ಸಭೆಯಲ್ಲಿ ತಜ್ಞರ ಸಲಹೆಯಂತೆ ನಿರ್ಧಾರ ತೆಗೆದುಕೊಳ್ಳಿ ಎಂದು ಕಾಂಗ್ರೆಸ್ ನಾಯಕರು ರುಜು ಹಾಕಿದಾಗ ಕಾಂಗ್ರೆಸ್ ಎಲ್ಲಿತ್ತು?. ಗಾಳಿ ಬಂದತ್ತ ತೂರಿಕೊಳ್ಳುವುದು ಪಲಾಯನವಾದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಇವರಿಬ್ಬರಲ್ಲಿ ಯಾರ ಹೇಳಿಕೆಯನ್ನು ಬೆಂಬಲಿಸುವುದು ಎಂದು ಕಾಂಗ್ರೆಸ್ ಗೊಂದಲದಲ್ಲಿದೆ" ಎಂದು ಹೇಳಿದೆ.
"ಸರ್ಕಾರಿ ಆಸ್ಪತ್ರೆಯಲ್ಲಿ 18 ರಿಂದ 45 ವಯಸ್ಸಿನೊಳಗಿರುವ ಎಲ್ಲರಿಗೂ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು" ಎಂದು ಸಿಎ. ಬಿ.ಎಸ್.ಯಡಿಯೂರಪ್ಪ ಅವರು ಮಾಹಿತಿ ನೀಡಿದ್ದಾರೆ.