ನವದೆಹಲಿ, ಏ.26 (DaijiworldNews/HR): ಉನ್ನತ ತಂತ್ರಜ್ಞಾನ, ಕೌಶಲ ಅಭಿವೃದ್ಧಿ ಮತ್ತು ಕೊರೊನಾ ವಿರುದ್ಧ ಹೋರಾಟ ಕುರಿತಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಜಪಾನಿನ ಪ್ರಧಾನಿ ಯೋಶಿಹಿದೆ ಸುಗಾ ಅವರೊಂದಿಗೆ ಸೋಮವಾರ ಚರ್ಚಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನಿನ ಪ್ರಧಾನಿ ಯೋಶಿಹಿದೆ ಸುಗಾ ಅವರು ಫೋನ್ ಕರೆಯ ಮೂಲಕ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಟ್ವೀಟ್ ಮಡಿರುವ ಪ್ರಧಾನಿ ಮೋದಿ, "ಜಪಾನ್ ಪ್ರಧಾನಿಯೊಂದಿಗೆ ಫೋನ್ ಕರೆಯ ಮೂಲಕ ಮಾತನಾಡಿದ್ದು, ಈ ವೇಳೆ ದ್ವಿಪಕ್ಷೀಯ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದೆವು. ಉನ್ನತ ತಂತ್ರಜ್ಞಾನ , ಕೌಶಲ ಅಭಿವೃದ್ಧಿ, ಕೊರೊನಾ ಸಾಂಕ್ರಾಮಿಕವನ್ನು ಜತೆಯಾಗಿ ಹೋರಾಡುವ ಬಗ್ಗೆಯೂ ಚರ್ಚೆ ನಡೆಸಿದ್ದೇವೆ" ಎಂದು ತಿಳಿಸಿದ್ದಾರೆ.