ಬೆಂಗಳೂರು, ಏ.26 (DaijiworldNews/HR): 14 ದಿನಗಳ ಕೊರೊನಾ ಕರ್ಫ್ಯೂಗೆ ಮಾರ್ಗಸೂಚಿ ಪರಿಶೀಲನೆಗೆ ಐವರ ಸಮಿತಿ ರಚಿಸಲಾಗಿದ್ದು, ಸಮಗ್ರ ಪರಿಶೀಲನೆ ಬಳಿಕ ಕೊರೊನಾ ಕರ್ಫ್ಯೂ ಮಾರ್ಗಸೂಚಿ ಪ್ರಕಟಿಸಲಾಗುತ್ತದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "14 ದಿನಗಳ ಕೊರೊನಾ ಕರ್ಫ್ಯೂಗೆ ಮಾರ್ಗಸೂಚಿ ಪರಿಶೀಲನೆಗೆ ಐವರ ಸಮಿತಿ ರಚಿಸಲಾದ್ದು, ಸಮಿತಿಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಆರ್ ಅಶೋಕ್, ಡಾ.ಕೆ ಸುಧಾಕರ್, ಸಿಎಸ್ ಪಿ ರವಿಕುಮಾರ್, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಇರಲಿದ್ದು, ಸಮಗ್ರ ಪರಿಶೀಲನೆ ಬಳಿಕ ಮಾರ್ಗಸೂಚಿ ಪ್ರಕಟಿಸಲಾಗುತ್ತದೆ" ಎಂದರು.
ಇನ್ನು "ಈಗಾಗಲೇ ಘೋಷಣೆಯಾಗಿರುವ ಬಳ್ಳಾರಿ ಮತ್ತು ರಾಮನಗರ ನಗರಸಭೆ ಚುನಾವಣೆಗಳು ನಿಗದಿತ ದಿನಾಂಕಗಳಂದು ನಡೆಯಲಿದ್ದು, ಉಳಿದ ಚುನಾವಣೆಗಳ ಮುಂದೂಡುವಿಕೆಗೆ ಮಾತ್ರವೇ ಚುನಾವಣಾ ಆಯೋಗಕ್ಕೆ ಶಿಫಾರಸು ಮಾಡಲಾಗಿದೆ" ಎಂದು ಹೇಳಿದ್ದಾರೆ.