ಪಾಟ್ನಾ, ಏ.26 (DaijiworldNews/HR): ಕೊರೊನಾ ಸೋಂಕಿತ ಪತ್ನಿಯನ್ನು ಕೊಂದು ಬಳಿಕ ತಾನು ಕೂಡ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಪಾಟ್ನಾದಲ್ಲಿ ನಡೆದಿದೆ.
ಸಾಂಧರ್ಭಿಕ್ ಚಿತ್ರ
ಪೂರ್ವ ಸೆಂಟ್ರಲ್ ರೈಲ್ವೆ(ಇಸಿಆರ್) ಉದ್ಯೋಗಿಯಾಗಿದ್ದ ಅತುಲ್ ಲಾಲ್ ಎಂಬವರು, ಮೊದಲಿಗೆ ಪತ್ನಿ ತುಲಿಕಾ ಕುಮಾರಿಯವರ ಕತ್ತು ಸೀಳಿ ನಂತರ ಮನೆಯ 5ನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಗಂಡ ಮತ್ತು ಹೆಂಡತಿ ಕೆಲ ಕುಟುಂಬ ಸಮಸ್ಯೆಗಳ ಬಗ್ಗೆ ಜಗಳವಾಡಿದ್ದರು ಎನ್ನಲಾಗಿದ್ದು, ಪತ್ನಿಗೆ ಕೊರೊನಾ ಸೋಂಕು ತಗುಲಿರುವುದರಿಂದ ತಮಗೂ ಬರಬಹುದು ಎಂಬ ಆತಂಕದಿಂದ ಈ ಕೃತ್ಯ ಎಸಗಿರಬಹುದು ಎಂದು ಪೊಲೀಸ್ ಇಲಾಖೆಯ ಮೂಲಗಳು ತಿಳಿಸಿವೆ.
ಇನ್ನು ಜಗಳದಿಂದ ಕೋಪಗೊಂಡಿದ್ದ ಅತುಲ್ ಲಾಲ್ ತನ್ನ ಹೆಂಡತಿಯ ಗಂಟಲನ್ನು ಬ್ಲೇಡ್ನಿಂದ ಸೀಳಿದ್ದು, ಇದನ್ನು ಕಂಡ ಸುಮಾರು 6 ಮತ್ತು 9 ವರ್ಷ ವಯಸ್ಸಿನ ಮಕ್ಕಳು ಕೂಗಾಡಿದ್ದು ಇದರಿಂದ ಹೆದರಿದ ಅತುಲ್ ಲಾಲ್ ಐದನೇ ಮಹಡಿಯಿಂದ ಹಾರಿ ಸಾವನ್ನಪ್ಪಿದರು.