ನವದೆಹಲಿ, ಏ.26 (DaijiworldNews/MB) : ದೇಶದಲ್ಲಿ ಆಮ್ಲಜನಕ ಮತ್ತು ಇತರ ಅಗತ್ಯ ವಸ್ತುಗಳ ತೀವ್ರ ಕೊರತೆ ಉಂಟಾಗಿದ್ದು ಈ ಹಿನ್ನೆಲೆಯಲ್ಲಿ, ಭಾರತಕ್ಕೆ ಅಮೇರಿಕಾ ನೆರವು ನೀಡಿದೆ. ಅಮೇರಿಕಾ ಅಧ್ಯಕ್ಷ ಜೋ ಬಿಡೆನ್ ಹಾಗೂ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಈಗಾಗಲೇ ಭಾರತಕ್ಕೆ ನೆರವು ನೀಡುವ ಭರವಸೆ ನೀಡಿದ್ದು 300 ಕ್ಕೂ ಅಧಿಕ ಆಮ್ಲಜನಕ ಕನ್ಸೆಂಟ್ರೇಟರ್ಗಳನ್ನು ಭಾರತಕ್ಕೆ ರವಾನೆ ಮಾಡಿದೆ.
ಈ ಬಗ್ಗೆ ಟ್ವೀಟ್ ಮಾಡಿದ ಸಚಿವ ಹರ್ದೀಪ್ ಸಿಂಗ್ ಪುರಿ, ''318 ಫಿಲಿಪ್ಸ್ ಆಕ್ಸಿಜನ್ ಕನ್ಸೆಂಟ್ರೇಟರ್ಗಳನ್ನು ಹೊತ್ತು ಏರ್ ಇಂಡಿಯಾ ವಿಮಾನ ನಿಲ್ದಾಣ ದೆಹಲಿಗೆ ಬರುತ್ತಿದೆ. ಪ್ರತಿ ಅಮೂಲ್ಯ ಮಾನವ ಜೀವವನ್ನು ಉಳಿಸಲು ಮತ್ತು ಕೊರೊನಾ ವಿರುದ್ಧ ಭಾರತದ ಉತ್ಸಾಹಭರಿತ ಹೋರಾಟವನ್ನು ಮತ್ತಷ್ಟು ಬಲಪಡಿಸಲು ನಾಗರಿಕ ವಿಮಾನಯಾನ ಕ್ಷೇತ್ರ ಪ್ರಯತ್ನಿಸುತ್ತಿದೆ'' ಎಂದು ಹೇಳಿದ್ದಾರೆ.
ಭಾರತೀಯ-ಅಮೇರಿಕನ್ ಲಾಭರಹಿತ ಸಂಸ್ಥೆ ಸೆವಾ ಇಂಟರ್ನ್ಯಾಷನಲ್ ಯುಎಸ್ಎ, ಐದು ಮಿಲಿಯನ್ ಡಾಲರ್ಗಳನ್ನು ಸಂಗ್ರಹಿಸುವ ಗುರಿಯನ್ನು ಹೊಂದಿದ್ದು, ಈಗಾಗಲೇ 1.5 ಮಿಲಿಯನ್ ಡಾಲರ್ಗಳನ್ನು ಸಂಗ್ರಹಿಸಿದೆ.
ಭಾರತೀಯ ಆಸ್ಪತ್ರೆಗಳಿಗೆ ಆಮ್ಲಜನಕ ಕನ್ಸೆಂಟ್ರೇಟರ್ಗಳನ್ನು ರವಾನಿಸಲು "ಹೆಲ್ಪ್ ಇಂಡಿಯಾ ಡಿಫೀಟ್ ಕೋವಿಡ್ -19" ಅಭಿಯಾನವನ್ನು ಈ ಸಂಸ್ಥೆಯನ್ನು ಪ್ರಾರಂಭಿಸಿದೆ.