ರಾಜಸ್ಥಾನ, ಎ.26 (DaijiworldNews/PY): ರಾಜಸ್ಥಾನದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಉಚಿತವಾಗಿ ಕೊರೊನಾ ಲಸಿಕೆ ನೀಡುವುದಾಗಿ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಘೋಷಣೆ ಮಾಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಅವರು, "18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಉಚಿತವಾಗಿ ಕೊರೊನಾ ಲಸಿಕೆ ನೀಡಲು ರಾಜಸ್ಥಾನ ಸರ್ಕಾರ ತೀರ್ಮಾನಿಸಿದೆ. ರಾಜ್ಯ ಈ ಚಾಲನೆಗೆ 3,000 ಕೋಟಿ ರೂ.ಗಳ ವೆಚ್ಚ ಭರಿಸಲಿದೆ" ಎಂದಿದ್ದಾರೆ.
"ಮುಂದಿನ ಸುತ್ತಿನ ಲಸಿಕಾ ನೋಂದಣಿಗಳು ಕೇಂದ್ರದ ಕೋ-ವಿನ್ ಪೋರ್ಟಲ್ ಹಾಗೂ ಆರೋಗ್ಯ ಸೇತು ಆಪ್ನಲ್ಲಿ ಇಂದಿನಿಂದ ತೆರೆದಿರುತ್ತವೆ" ಎಂದು ತಿಳಿಸಿದ್ದಾರೆ.
"18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಉಚಿತ ಲಸಿಕೆಗಳನ್ನು ನೀಡಲು ದೆಹಲಿ ಸರ್ಕಾರವ ಕೂಡಾ ನಿರ್ಧರಿಸಿದ್ದು, ಇಂದು ನಾವು 1.34 ಕೋಟಿ ಲಸಿಕೆಗಳನ್ನು ಖರೀದಿಸಲು ಅನುಮೋದನೆ ನೀಡಿದ್ದೇವೆ. ಶೀಘ್ರದಲ್ಲೇ ಅದನ್ನು ಖರೀದಿಸಲಾಗುವುದು. ಜನರಿಗೆ ಬೇಗನೆ ಕೊರೊನಾ ಲಸಿಕೆ ನೀಡಲಾಗುವುದು" ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ಧಾರೆ.