ಬೆಂಗಳೂರು, ಎ.26 (DaijiworldNews/PY): ಡಿಜೆ ಹಳ್ಳಿ, ಕೆಜೆ ಹಳ್ಳಿ ಗಲಭೆ ಪ್ರಕಣಕ್ಕೆ ಸಂಬಂಧಪಟ್ಟಂತೆ 18 ಆರೋಪಿಗಳಿಗೆ ಎನ್ಐಎ ಕೋರ್ಟ್ ಜಾಮೀನು ನಿರಾಕರಿಸಿದೆ.
ವಿಶೇಷ ಕೋರ್ಟ್ ನ್ಯಾಯಾಧೀಶ ಕಸನಪ್ಪ ನಾಯಕ್ ಅವರು ಕಾನೂನು ಬಾಹಿರ ಚಟುವಟಿಕೆ ಕಾಯ್ದೆ ಅನ್ವಯ ಜಾಮೀನು ನಿರಾಕರಿಸಿದ್ದಾರೆ.
ಮೊಹಮದ್ ತೌಸೀಫ್, ಮುದಾಸಿರ್ ಅಹ್ಮದ್, ತನ್ವೀರ್ ಖಾನ್, ಆರೀಫ್ ಫಾಷಾ, ಸೈಯ್ಯದ್ ಖಾಲಿದ್, ಶಾಮೀಲ್ ಪಾಷಾ, ಸೈಯ್ಯದ್ ಮುಬಾರಕ್ ಅಲಿಯಾಸ್ ಡಿಚ್ಚಿ ಮುಬಾರಕ್, ಫಾರೂಕ್ ಹಾಗೂ ಶಹಬಾಜ್ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿದಾರರ ಪರ ವಾದ ಮಾಡಿದ ವಕೀಲರು, ತಮ್ಮ ಕಕ್ಷಿದಾರರು ಯಾವುದೆ ಉಗ್ರಸಂಘಟನೆಗೆ ಸೇರಿದವರಲ್ಲ. ಸರಿಯಾದ ರೀತಿಯಲ್ಲಿ ತನಿಖೆ ನಡೆಸದೇ ಪೊಲೀಸರು ಅವರ ವಿರುದ್ದ ಪಿಟಿಷನ್ ಸಲ್ಲಿಸಿದ್ದಾರೆ ಎಂದು ವಾದಿಸಿದ್ದರು.
ವಾದವನ್ನು ಆಲಿಸಿದ ನ್ಯಾಯಾಲಯ, "ಇದು ಸರಳ ಗಲಭೆಯ ಪ್ರಕರಣ ಅಲ್ಲ. ಆದರೆ, ಆರೋಪಿಗಳಿಂದ ಸಂಚು ನಡೆದಿದೆ. ಆರೋಪಿಗಳು ಡಿಸಿಪಿಯ ವಾಹನವನ್ನು ಉರುಳಿಸುವ ಮಟ್ಟಿಗೆ ಹೋಗಿದ್ದಾರೆ. ಅಲ್ಲದೇ, ಪೊಲೀಸ್ ಸಿಬ್ಬಂದಿಗಳ ಹಾಗೂ ಖಾಸಗಿ ವ್ಯಕ್ತಿಗಳ ವಾಹನಗಳನ್ನು ಸುಟ್ಟು ಹಾಕಿದ್ದಾರೆ. ಈ ಆರೋಪಿಗಳು ಸೇರಿದಂತೆ ಉಳಿದ ಆರೋಪಿಗಳು ಪೊಲೀಸ್ ಠಾಣೆಗೂ ಕೂಡಾ ಹಾನಿ ಮಾಡಿದ್ದಾರೆ" ಎಂದು ಹೇಳಿದೆ.
ಮೊಹಮ್ಮದ್ ಮುದಾಸೀರ್ ಕಲೀಮ್, ಸೈಯದ್ ಇಕ್ರಾಮುದ್ದೀನ್ ಅಲಿಯಾಸ್ ಸೈಯದ್ ನವೀದ್, ಮೊಹಮ್ಮದ್ ಅತೀಫ್, ನಕೀಬ್ ಪಾಷಾ, ಇಮ್ರಾನ್ ಅಹ್ಮದ್, ಮೊಹಮ್ಮದ್ ಅಜರ್ ಹಾಗೂ ಕರೀಮ್ ಅಲಿಯಾಸ್ ಸದ್ದಾಂ, ಶೇಖ್ ಮುಹಮ್ಮದ್ ಬಿಲಾಲ್, ಸೈಯದ್ ಆಸಿಫ್ ಅವರು ಜಾಮೀನು ಅರ್ಜಿ ಸಲ್ಲಿಸಿದ್ದು, ಆದರೆ ನ್ಯಾಯಾಲಯವು ಅರ್ಜಿದಾರರ ವಿರುದ್ಧದ ಆರೋಪಗಳನ್ನು ತಿಳಿಸಿ ಜಾಮೀನಿ ಅರ್ಜಿಯನ್ನು ನಿರಾಕರಿಸಿದೆ.