ಬೆಂಗಳೂರು, ಏ.26 (DaijiworldNews/HR): "ಕರ್ನಾಟಕದಲ್ಲಿ ಕೊರೊನಾ ಸೋಂಕಿನ ಬೆನ್ನಲ್ಲೇ ಆಕ್ಸಿಜನ್ ಕೊರತೆ ಕೂಡ ಹೆಚ್ಚಾಗುತ್ತಿದ್ದು, ರಾಜ್ಯ ಸರ್ಕಾರ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುತ್ತಿದೆ" ಎಂದು ಮಾಜಿ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, "ಕರ್ನಾಟಕದಲ್ಲಿ ಆಕ್ಸಿಜನ್ ವೈದ್ಯಕೀಯ ಸೌಲಭ್ಯದ ಕೊರತೆ ದಿನೇ ದಿನೇ ಹೆಚ್ಚಾಗುತ್ತಿದೆ. ಅತ್ತ ಬಿಜೆಪಿ ಸರ್ಕಾರ 'ಆಲ್ ಇಸ್ ವೆಲ್' ಎಂಬ ಭ್ರಮೆ ಮೂಡಿಸುತ್ತಿದೆ" ಎಂದರು.
"ರಾಜ್ಯದ ಜನರನ್ನು ಕತ್ತಲಲ್ಲಿಟ್ಟು ಪದೇ ಪದೇ ಆದೇಶ ಮಾಡುವ ಸರ್ಕಾರ, ಕನಿಷ್ಠ ಶಾಸಕರಿಗಾದರೂ ಆಕ್ಸಿಜನ್ ಸೇರಿದಂತೆ ವ್ಯವಸ್ಥೆ ಹಾಗೂ ಲಭ್ಯತೆಯ ಮಾಹಿತಿ ನೀಡಲಿ" ಎಂದಿದ್ದಾರೆ.
ಇನ್ನು "ನಮಗೆ ಕ್ಷೇತ್ರದ ಜನರ ಬಗ್ಗೆ ಕಾಳಜಿ ಕಳಕಳಿ ಇದೆ, ವಿರೋಧ ಪಕ್ಷಗಳಿಗಲ್ಲದಿದ್ದರೂ ಜನರಿಗಾಗಿ ಜನ ಪ್ರತಿನಿಧಿಗಳ ಜೊತೆ ಸರ್ಕಾರ ಮಾಹಿತಿ ಹಂಚಿಕೊಳ್ಳಲಿ" ಎಂದು ಹೇಳಿದ್ದಾರೆ.