ಬೀದರ್ , ಏ.26 (DaijiworldNews/HR): ದೇಶದಾದ್ಯಂತ ಕೊರೊನಾ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚಗುತ್ತಿದ್ದು, ಆಕ್ಸಿಜನ್ ಸಿಗದೆ ಜನ ಬಲಿಯಾದರೆ ಅದಕ್ಕೆ ಪ್ರಧಾನಿ ನರೆಂದ್ರ ಮೋದಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೊಣೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, "ಆಕ್ಸಿಜನ್ ಕೊರತೆಯಿಂದ ಪ್ರತಿ ದಿನ 30 ಜನರು ಸಾವನ್ನಪ್ಪುತ್ತಿದ್ದು, ಜಿಲ್ಲೆಗೆ 30 ಕೆಎಲ್ ಆಕ್ಸಿಜನ್ ಅಗತ್ಯವಿದ್ದು, ನಿಗದಿತ ಪ್ರಮಾಣ ಆಕ್ಸಿಜನ್ ಪೂರೈಸದಿದ್ದರೆ ಅನಾಹುತ ಆಗಲಿದೆ. ಆಕ್ಸಿಜನ್ ಸಿಗದೇ ಜನ ಬಲಿಯಾದರೆ ಮೋದಿ, ಬಿಎಸ್ ವೈ ಹೊಣೆ" ಎಂದು ಎಚ್ಚರಿಕೆ ನೀಡಿದ್ದಾರೆ.
ಇನ್ನು "ಕರ್ನಾಟಕದ ಬೀದರ್ ಜಿಲ್ಲೆ ಆಕ್ಸಿಜನ್ ಕೊರತೆಯಿಂದಾಗಿ ದಿನಕ್ಕೆ 30 ಸಾವುಗಳನ್ನು ಕಾಣುತ್ತಿದ್ದು, ಆಮ್ಲಜನಕ ಪೂರೈಕೆಯನ್ನು ನಿಯಂತ್ರಿಸದಿದ್ದರೆ ಇದು 50 ಕ್ಕೆ ಹೆಚ್ಚಾಗುವ ಸಾಧ್ಯತೆ ಇದೆ"ಎಂದು ಹೇಳಿದ್ದಾರೆ.