ಹುಬ್ಬಳ್ಳಿ, ಏ.25 (DaijiworldNews/HR): ಕೊರೊನಾ ಲಾಕ್ಡೌನ್ ಕಾರಣದಿಂದಾಗಿ ಜನರಿಗೆ ಉಚಿತವಾಗಿ ಪಡಿತರ ವಿತರಿಸುದು ಸರಿಯಲ್ಲ ಎಂದು ಉದ್ಯಮಿ ವಿಜಯ ಸಂಕೇಶ್ವರ್ ಹೇಳಿದ್ದಾರೆ.
ಈ ಕುರಿತು ಸುದ್ದಿ ಗೋಷ್ಟಿಯಲ್ಲಿ ಮಾತನಾಡಿದ ಅವರು, "ಜನರಿಗೆ ಉಚಿತವಾಗಿ ಅಕ್ಕಿ ಕೊಟ್ಟರೆ ಅವರು ಕೆಲಸಕ್ಕೆ ಹೋಗದೇ ಮನೆಯಲ್ಲೇ ಉಳಿಯುತ್ತಾರೆ, ಹಾಗಾಗಿ ಇದರಿಂದ ಕೈಗಾರಿಕಾ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ" ಎಂದರು.
"ಕೇಂದ್ರ ಸರ್ಕಾರ ಮತ್ತೆ ಮತ್ತೆ ತಪ್ಪು ಮಾಡುತ್ತಿದ್ದು, ಕಳೆದ ವರ್ಷ ಲಾಕ್ಡೌನ್ ಆದಾಗ ಜನರಿಗೆ ಮೂರು ತಿಂಗಳು ಉಚಿತವಾಗಿ ಅಕ್ಕಿ ವಿತರಿಸಿತ್ತು.ಈಗ ಮತ್ತೆ 80 ಕೋಟಿ ಜನರಿಗೆ ಅಕ್ಕಿ ಕೊಡುತ್ತೇವೆ ಎಂದಿದ್ದು, ಇದರಿಂದ ಉತ್ಪಾದನಾ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ" ಎಂದಿದ್ದಾರೆ.
ಇನ್ನು "ಜನರಿಗೆ ಮಾಡಲು ತುಂಬಾ ಕೆಲಸಗಳಿವೆ, ಆದರೆ ಉಚಿತ ಅಕ್ಕಿ ಕೊಡುವುದರಿಂದ ಅವರು ಕೆಲಸದ ಸ್ಥಳದಿಂದ ಮನೆಗೆ ಹೋಗುತ್ತಾರೆ. ನಮ್ಮಂತಹ ದೇಶದಲ್ಲಿ ಇಂತಹ ಸವಲತ್ತುಗಳನ್ನು ಕೊಡುವುದು ಸರಿಯಲ್ಲ" ಎಂದು ಹೇಳಿದ್ದಾರೆ.