ನವದೆಹಲಿ, ಎ.25 (DaijiworldNews/PY): "18-45 ವರ್ಷದೊಳಗಿನವರು ಕೊರೊನಾ ಲಸಿಕೆ ಪಡೆಯಲು ಕೋವಿನ್ ವೆಬ್ ಪೋರ್ಟ್ಲ್ನಲ್ಲಿ ಕಡ್ಡಾಯವಾಗಿ ಹೆಸರನ್ನು ನೋದಣಿ ಮಾಡಿಸಿಕೊಳ್ಳಬೇಕು" ಎಂದು ಅಧಿಕೃತ ಮೂಲಗಳು ರವಿವಾರ ತಿಳಿಸಿವೆ.
"45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಸ್ಥಳದಲ್ಲೇ ನೋದಣಿ ಮಾಡಿ ಲಸಿಕೆ ನೀಡಲಾಗುವುದು. ಆದರೆ, 18 ವರ್ಷ ಮೇಲ್ಪಟ್ಟವರು ಎಪ್ರಿಲ್ 28ರಿಂದ ಕೋವಿನ್ ಫ್ಲಾಟ್ಫಾರಂ ಹಾಗೂ ಆರೋಗ್ಯಸೇತು ಆ್ಯಪ್ ಮುಖೇನ ಹೆಸರನ್ನು ನೋಂದಾಯಿಸಿಕೊಳ್ಳಬಹುದು" ಎಂದು ಮೂಲಗಳು ತಿಳಿಸಿವೆ.
ದೇಶದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಳವಾದ ಕಾರಣ ಮೇ 1 ರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಪಡೆಯಲು ನಿರ್ಧರಿಸಲಾಗಿದೆ.
"18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ವ್ಯಾಕ್ಸಿನೇಷನ್ ಅನುಮತಿ ನೀಡಿದ ಹಿನ್ನೆಲೆ ಲಸಿಕೆ ಪಡೆದುಕೊಳ್ಳಲು ಹೆಚ್ಚು ಜನಸಂದಣಿಯಾಗುವ ಸಾಧ್ಯತೆ ಇದೆ. ಹಿನ್ನೆಲೆ 18-45 ವರ್ಷದೊಳಗಿನವರು ಕೊರೊನಾ ಲಸಿಕೆ ಪಡೆಯಲು ಕೋವಿನ್ ವೆಬ್ ಪೋರ್ಟ್ಲ್ನಲ್ಲಿ ಕಡ್ಡಾಯವಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಒಂದುವೇಳೆ ನೋಂದಾವಣಿಯಾಗದೇ ಲಸಿಕಾ ಕೇಂದ್ರಕ್ಕೆ ಬಂದಲ್ಲಿ ಅನುಮತಿ ಇಲ್ಲ" ಎಂದು ಅಧಿಕಾರಿಯೋರ್ವರು ಹೇಳಿದ್ದಾರೆ.