ನವದೆಹಲಿ, ಎ.25 (DaijiworldNews/PY): "ಆಸ್ಪತ್ರೆಗಳು ಅನವಶ್ಯಕವಾಗಿ ಆಕ್ಸಿಜನ್ ಕೊರತೆ ಇದೆ ಎಂದು ಹೇಳುವಂತಿಲ್ಲ" ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ.
"ಮಾಧ್ಯಮಗಳು ವರದಿ ಮಾಡುವ ಮುನ್ನ ವಸ್ತುಸ್ಥಿತಿಯನ್ನು ಮೊದಲು ಪರಿಶೀಲಿಸಬೇಕು" ಎಂದು ಹೇಳಿದ್ದಾರೆ.
"ಆಸ್ಪತ್ರೆಗಳು ಅನವಶ್ಯಕವಾಗಿ ಆಕ್ಸಿಜನ್ ಕೊರತೆ ಇದೆ ಎಂದು ಹೇಳುವಂತಿಲ್ಲ. ಇದರಿಂದಾಗಿ ನಿಜವಾಗಿಯೂ ನೆರವಿನ ಅವಶ್ಯಕತೆ ಇರುವ ಆಸ್ಪತ್ರೆಗಳಿಗೆ ತೊಂದರೆ ಉಂಟಾಗಲಿದೆ" ಎಂದಿದ್ದಾರೆ.
ಇದಕ್ಕೂ ಮುನ್ನ, "ಕೊರೊನಾ ಪ್ರಕರಣಗಳು ಹೆಚುತ್ತಿರು ಹಿನ್ನೆಲೆ, ರಾಷ್ಟ್ರ ರಾಜಧಾನಿಯಲ್ಲಿ ಆರು ದಿನಗಳ ಕಾಲ ಲಾಕ್ಡೌನ್ ಜಾರಿ ಮಾಡಲಾಗುತ್ತಿದ್ದು, ಮೇ 3ರ ಸೋಮವಾರದಿಂದ ಬೆಳಗ್ಗೆ 5 ಗಂಟೆಯವರೆಗೂ ಲಾಕ್ಡೌನ್ ಅನ್ನು ವಿಸ್ತರಣೆ ಮಾಡಲಾಗಿದೆ. ದೆಹಲಿಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಈ ಹಿನ್ನೆಲೆ ಲಾಕ್ಡೌನ್ನ ಅಗತ್ಯ ಇದೆ" ಎಂದು ಸಿಎಂ ಅರವಿಂದ್ ಕೇಜ್ರೀವಾಲ್ ತಿಳಿಸಿದ್ದಾರೆ.
ಶನಿವಾರ ದೆಹಲಿಯಲ್ಲಿ 24,000ಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ವರದಿಯಾಗಿದ್ದು, 357 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ.