ಶಿವಮೊಗ್ಗ, ಏ.25 (DaijiworldNews/HR): ವೀಕೆಂಡ್ ಕರ್ಫ್ಯೂ ವೇಳೆ ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸರ ಮುಂದೆ ಕೊರೊನ ಸೋಂಕಿತನೊಬ್ಬ ಪ್ರತ್ಯಕ್ಷನಾಗಿ ಬೆಚ್ಚಿ ಬೀಳಿಸಿದ ಘಟನೆ ಶಿವಮೊಗ್ಗದ ಅಮೀರ್ ಅಹಮದ್ ಸರ್ಕಲ್ನಲ್ಲಿ ನಡೆದಿದೆ.
ಬೆಳಗ್ಗೆಯಿಂದಲೂ ಟ್ರಾಫಿಕ್ ಪೊಲೀಸರು ವಾಹನಗಳನ್ನು ತಡೆದು ತಪಾಸಣೆ ನಡೆಸುತ್ತಿದ್ದು, ಮಧ್ಯಾಹ್ನದ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ವ್ಯಕ್ತಿಯೊಬ್ಬನನ್ನು ಅಡ್ಡಗಟ್ಟಿ ಪ್ರಶ್ನಿಸಿದಾಗ, ನಾನು ಕೊರೊನಾ ಪೇಷೆಂಟ್ ಅಂತಾ ಹೇಳಿ, ಸುತ್ತಲಿರುವುವವರನ್ನು ಇದ್ದವರನ್ನು ಬೆಚ್ಚಿ ಬೀಳಿಸಿದ್ದಾರೆ.
ಇನ್ನು ದಾಖಲೆಗಳ ಪರಿಶೀಲನೆ ವೇಳೆ ಕೊರೊನಾ ಪಾಸಿಟಿವ್ ದಾಖಲೆ ತೋರಿಸಿದ್ದು, ಇದನ್ನು ಕಂಡು ದಂಗಾದ ಪೊಲೀಸರು, ಪಾಸಿಟಿವ್ ಇದ್ದವರು ರಸ್ತೆಯಲ್ಲೇಕೆ ಓಡಾಡ್ತಿದ್ದೀರ ಎಂದು ಪ್ರಶ್ನಿಸಿದ್ದು, ಅದಕ್ಕೆ ನಾನು ಈಗ ಆಸ್ಪತ್ರೆಯಿಂದ ಬರುತ್ತಿದ್ದೇನೆ ಎಂದು ಸೋಂಕಿತ ಉತ್ತರಿಸಿದ. ಸುತ್ತಲೂ ಇದ್ದ ಪೊಲೀಸರು, ವಾಹನಗಳ ದಾಖಲೆ ತೋರಿಸಲು ನಿಂತಿದ್ದವರು ದಂಗಾಗಿದ್ದಾರೆ.
ಕೂಡಲೇ ಆ ಸೋಂಕಿತನನ್ನು ಮನೆಗೆ ತೆರಳುವಂತೆ ಪೊಲೀಸರು ಸೂಚಿಸಿದ್ದಾರೆ.