ತಿರುವನಂತಪುರಂ, ಎ.25 (DaijiworldNews/PY): ಕೊರೊನಾ ಪಾಸಿಟಿವ್ ರೋಗಿಯೋರ್ವರ ವಿವಾಹ ನಡೆದ ಅಪರೂಪದ ಘಟನೆ ಕೇರಳದ ಆಲಪ್ಪುಳ ಜಿಲ್ಲೆಯ ಆಸ್ಪತ್ರೆಯ ಕೊರೊನಾ ವಾರ್ಡ್ನಲ್ಲಿ ನಡೆದಿದೆ.
ವರ ವರ ಕೈನಕಾರಿ ಮೂಲದ ಶರತ್ ಸೋಮ ಹಾಗೂ ಅವರ ತಾಯಿಗೆ ವಿವಾಹದ ಕೆಲವು ದಿನಗಳ ಮುನ್ನ ಕೊರೊನಾ ಸೋಂಕು ತಗುಲಿದ ಕಾರಣ ಅವರನ್ನು ಎಪ್ರಿಲ್ 25ರಂದು ವಂದನಂ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಕೇರಳದ ಆಲಪ್ಪುಳ ಜಿಲ್ಲೆಯ ಆಸ್ಪತ್ರೆಯ ಕೋವಿಡ್ ವಾರ್ಡ್ ಕೋವಿಡ್ ಪಾಸಿಟಿವ್ ರೋಗಿಯ ವಿವಾಹದ ಸ್ಥಳವಾಗಿ ಬದಲಾದ ನಂತರ ಅಪರೂಪದ ಸಂಭ್ರಮಾಚರಣೆಗೆ ಸಾಕ್ಷಿಯಾಗಿದೆ.
ವಧು-ವರರ ಕುಟುಂಬಗಳು ನಿಗದಿತ ದಿನಾಂಕ ಹಾಗೂ ಸಮಯದಲ್ಲಿ ವಿವಾಹ ಸಮಾರಂಭ ನಡೆಸಲು ತೀರ್ಮಾನ ಮಾಡಿದ್ದರು. ಈ ಹಿನ್ನೆಲೆ ಆಸ್ಪತ್ರೆಯನ್ನು ವಿವಾಹದ ಸ್ಥಳವಾಗಿ ಆಯ್ಕೆ ಮಾಡಿದರು. ವಿವಾಹಕ್ಕೆ ಕಲೆಕ್ಟರ್ ಹಾಗೂ ಆಸ್ಪತ್ರೆ ಅಧೀಕ್ಷಕ ಡಾ.ಆರ್.ವಿ.ರಾಮ್ಲಾಲ್ ಅವರಿಂದ ಅನುಮತಿ ಪಡೆದ ಬಳಿಕ ವಧು ಅಭಿರಾಮಿ ಅವರ ಸಂಬಂಧಿಗಳು ವಿವಾಹದ ದಿನದಂದು ಪಿಪಿ ಕಿಟ್ ಧರಿಸಿ ಆಸ್ಪತ್ರೆಗೆ ಬಂದಿದ್ದಾರೆ. ಬಳಿಕ ವಧು-ವರರು ಹೂಮಾಲೆ ವಿನಿಮಯ ಮಾಡಿಕೊಂಡಿದ್ದಾರೆ.
ಸುದ್ದಿ ಸಂಸ್ಥೆಯೊಂದರ ವರದಿಯ ಪ್ರಕಾರ, ಒಂದು ವರ್ಷದ ಹಿಂದೆ ವಿವಾಹವನ್ನು ನಿಗದಿಪಡಿಸಲಾಗಿತ್ತು. ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆ ವಿವಾಹವನ್ನು ಮುಂದೂಡಲಾಗಿತ್ತು. ಅಭಿರಾಮಿ ತನ್ನ ಸಂಬಂಧಿಕರ ಸ್ಥಳಕ್ಕೆ ಹಿಂದಿರುಗಲಿದ್ದು, ಶರತ್ ಸೋಮ ಅವರ ವರದಿ ನೆಗೆಟಿವ್ ಬಂದ ಬಳಿಕ ಹಾಗೂ ಕ್ಯಾರಂಟೈನ್ ಪೂರ್ತಿಗೊಳಿಸಿದ ಬಳಿಕ ಮನೆಗೆ ಮರಳಬಹುದಾಗಿದೆ.