ಲಕ್ನೋ, ಏ.25 (DaijiworldNews/MB) : ''ಉತ್ತರ ಪ್ರದೇಶದ ಸರ್ಕಾರಿ ಆಸ್ಪತ್ರೆಯಾಗಲಿ ಅಥವಾ ಖಾಸಗಿ ಆಸ್ಪತ್ರೆಯಾಗಲಿ ಯಾವುದರಲ್ಲೂ ಆಕ್ಸಿಜನ್ ಕೊರೆತೆ ಉಂಟಾಗಿಲ್ಲ'' ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
''ಈಗಾಗಲೇ 31 ಹೊಸ ಆಕ್ಸಿಜನ್ ಫ್ಲಾಂಟ್ ಸ್ಥಾಪನೆ ಬಗ್ಗೆ ಕೆಲಸ ನಡೆಯುತ್ತಿದೆ. ರಾಜ್ಯದ ಯಾವುದೇ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರೆತೆ ಉಂಟಾಗಿಲ್ಲ. ಹಾಗೆಯೇ ರೆಮಿಡಿಸಿವಿರ್ ಹಾಗೂ ಲಸಿಕೆಗೆ ರಾಜ್ಯದಲ್ಲಿ ಕೊರತೆಯಿಲ್ಲ'' ಎಂದು ತಿಳಿಸಿದರು.
''ಐಐಟಿ ಕಾನ್ಫುರ, ಐಐಎಂ ಲಖನೌ, ಮತ್ತು ಐಐಟಿ ಬಿಹೆಚ್ ಯು ಸಹಭಾಗಿತ್ವದಲ್ಲಿ ಆಕ್ಸಿಜನ್ ಆಡಿಟ್ ಮಾಡಲಾಗುವುದು, ಆಕ್ಸಿಜನ್ ಬೇಡಿಕೆ, ಪೂರೈಕೆ ಮತ್ತು ವಿತರಣೆಗೆ ನೇರ ವ್ಯವಸ್ಥೆ ಅನುಷ್ಠಾನ ಮಾಡಲಾಗುವುದು'' ಎಂದು ಮಾಹಿತಿ ನೀಡಿದರು.
''ಕಳೆದ ಬಾರಿಗಿಂತ ಸೋಂಕಿತರ ಸಂಖ್ಯೆ 30 ಪಟ್ಟು ಅಧಿಕವಾಗಿದ್ದು ಜನರು ಈ ಕೊರೊನಾವನ್ನು ಸಾಮಾನ್ಯ ಜ್ವರದಂತೆ ಕಾಣುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಆದರೆ ಅದು ತಪ್ಪು, ಜನರು ಕೊರೊನಾ ಮುನ್ನೆಚ್ಚರಿಕೆಯನ್ನು ನಿರ್ಲಕ್ಷ್ಯ ಮಾಡಬಾರದು'' ಎಂದು ಮನವಿ ಮಾಡಿದರು.
''ಇನ್ನು ಕಾಳಸಂತೆಯಲ್ಲಿ ಆಕ್ಸಿಜನ್ ಮಾರಾಟ ಹಾಗೂ ದಾಸ್ತಾನಿನಿಂದ ತೊಂದರೆಯಾಗುತ್ತಿದ್ದು, ಹಲವರ ನೆರವಿನಿಂದ ಅದನ್ನು ಪತ್ತೆ ಹಚ್ಚಲಾಗುತ್ತದೆ'' ಎಂದರು.