ನವದೆಹಲಿ, ಏ.25 (DaijiworldNews/HR): ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಸಶಸ್ತ್ರ ಸೀಮಾ ಬಲದ ಮಾಜಿ ಮುಖ್ಯಸ್ಥ ಅರುಣ್ ಚೌಧರಿ(66) ನಿಧನವಾಗಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಭಾರತೀಯ ಪೊಲೀಸ್ ಸೇವಾ ಅಧಿಕಾರಿಯಾಗಿದ್ದ ಚೌಧರಿ ಸುಮಾರು ಎರಡು ದಶಕಗಳ ಕಾಲ ಗುಪ್ತಚರ ಬ್ಯೂರೋದಲ್ಲಿ ಸೇವೆ ಸಲ್ಲಿಸಿದ್ದಾರೆ. ಬಳಿಕ ಅವರು ಜಮ್ಮು ಮತ್ತು ಕಾಶ್ಮೀರ ಟೇಬಲ್ನ ಮುಖ್ಯಸ್ಥರಾಗಿದ್ದರು.
ಇನ್ನು ಡಿಸೆಂಬರ್ 2012 ರಲ್ಲಿ ಎಸ್ಎಸ್ಬಿಯ ಮಹಾನಿರ್ದೇಶಕರಾಗಿ ನೇಮಕಗೊಂಡಿದ್ದ ಚೌಧರಿ ಏಪ್ರಿಲ್ 30, 2014ರವರೆಗೆ ಈ ಹುದ್ದೆಯಲ್ಲಿದ್ದು ನಿವೃತ್ತರಾದರು.