ನವದೆಹಲಿ, ಏ.25 (DaijiworldNews/MB) : ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವ್ಯವಸ್ಥೆ ವಿಫಲವಾಗಿದೆ, ಹಾಗಿರುವಾಗ ಇನ್ನು 'ಜನ್ ಕಿ ಬಾತ್' ನಡೆಸುವುದು ಮುಖ್ಯ ಎಂದು ಕಾಂಗ್ರೆಸ್ ಮುಖಂಡ, ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ.
ಪ್ರತಿ ತಿಂಗಳು ಕೊನೆಯ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಉದ್ದೇಶಿಸಿ ರೆಡಿಯೋದಲ್ಲಿ ಮನ್ ಕಿ ಬಾತ್ ಕಾರ್ಯಕ್ರಮ ನಡೆಸುತ್ತಾರೆ. ಇಂದು ಪ್ರಧಾನಿಯವರು ಮನ್ ಕಿ ಬಾತ್ ಕಾರ್ಯಕ್ರಮ ನಡೆಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ ಅವರು, ''ವ್ಯವಸ್ಥೆ ವಿಫಲವಾಗಿದೆ, ಹಾಗಿರುವಾಗ ಇನ್ನು ಜನ್ ಕಿ ಬಾತ್ ನಡೆಸುವುದು ಮುಖ್ಯ'' ಎಂದಿದ್ದಾರೆ.
''ಈ ಬಿಕ್ಕಟ್ಟಿನಲ್ಲಿ ದೇಶಕ್ಕೆ ಜವಾಬ್ದಾರಿಯುತ ನಾಗರಿಕರ ಅಗತ್ಯವಿದೆ. ಜನರಿಗೆ ಸಹಾಯ ಮಾಡಲು ಹಾಗೂ ಅವರ ನೋವಿಗೆ ಸ್ಪಂಧಿಸಲು ನನ್ನ ಕಾಂಗ್ರೆಸ್ ಸಹೋದ್ಯೋಗಿಗಳಿಗೆ ಎಲ್ಲಾ ರಾಜಕೀಯ ಕೆಲಸಗಳನ್ನು ತೊರೆಯಬೇಕೆಂದು ನಾನು ವಿನಂತಿಸುತ್ತೇನೆ'' ಎಂದು ಹೇಳಿದ್ದಾರೆ.
ಹಾಗೆಯೇ ''ಇದು ಕಾಂಗ್ರೆಸ್ ಕುಟುಂಬದ ಧರ್ಮ'' ಎಂದೂ ಹೇಳಿದ್ದಾರೆ.