ಮುಂಬೈ, ಏ.25 (DaijiworldNews/HR): ಮಹಾರಾಷ್ಟ್ರದ ಯವತಮಲ್ ಜಿಲ್ಲೆಯಲ್ಲಿ ಮದ್ಯ ಸಿಗದ್ದಕ್ಕೆ ಸ್ಯಾನಿಟೈಸರ್ ಕುಡಿದು ಏಳು ಮಂದಿ ಸಾವನ್ನಪ್ಪಿರುವ ಎರಡು ಪ್ರತ್ಯೇಕ ಘಟನೆ ನಡೆದಿದೆ.
ಸಾಂಧರ್ಭಿಕ ಚಿತ್ರ
ಅವರ ಆರೋಗ್ಯದಲ್ಲಿ ಏರುಪೇರು ಕಂಡು ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಏಳು ಜನರು ಕೂಡ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ತೆಲಿ ಫೀಲ್ ವ್ಯಾಪ್ತಿಯ ದತ್ತಾ ಲಾಂಜೇವಾರ್ ಮತ್ತು ನೂತನ್ ಸ್ಯಾನಿಟೈಸರ್ ಕುಡಿದು ಮನೆಗೆ ತೆರಳಿದ್ದು, ರಾತ್ರಿ ಇಬ್ಬರಿಗೀ ತಲೆನೋವು ಹೆಚ್ಚಾದ ಹಿನ್ನೆಲೆ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೆಲ ಸಮಯದ ಬಳಿಕ ಇಬ್ಬರು ಸಾವನ್ನಪ್ಪಿದ್ದಾರೆ.
ಇನ್ನು ಆಯತ್ ನಗರದಲ್ಲಿ ಸಂತೋಷ್ ಮೆಹ್ರಾ, ಗಣೇಶ್ ನಾಂದೇಕರ್, ಗಣೇಶ್ ಶೆಲಾರ್ ಮತ್ತು ಸುನಿಲ್ ಡೆಂಗಲೆ ಸಹ ಸ್ಯಾನಿಟೈಸರ್ ಸೇವಿಸಿದ್ದರಿಂದ ಸಾವನ್ನಪ್ಪಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೃತದೇಹಗಳನ್ನ ಮರಣೋತ್ತರ ಶವ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಮತ್ತೋರ್ವನ ಹೆಸರು ತಿಳಿದು ಬಂದಿಲ್ಲ.