ನವದೆಹಲಿ, ಏ.24 (DaijiworldNews/HR): ಬಯೋಲಾಜಿಕಲ್ ಇ ಲಿಮಿಟೆಡ್ (ಬಿಇ) ತನ್ನ ಕೊರೊನಾ ಉಪಘಟಕ ಲಸಿಕೆಯ ಎರಡನೇ ಹಂತದ ವೈದ್ಯಕೀಯ ಪ್ರಯೋಗವನ್ನ ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಕೇಂದ್ರ ಔಷಧ ಪ್ರಮಾಣಿತ ನಿಯಂತ್ರಣ ಸಂಸ್ಥೆ (ಸಿಡಿಎಸ್ಸಿಒ) ವಿಷಯ ತಜ್ಞರ ಸಮಿತಿ (ಎಸ್ಇಸಿ)ಯಿಂದ ಮೂರನೇ ಹಂತದ ವೈದ್ಯಕೀಯ ಪ್ರಯೋಗವನ್ನ ಪ್ರಾರಂಭಿಸಲು ಅನುಮೋದನೆ ಪಡೆದಿದೆ.
ಬಯೋಲಾಜಿಕಲ್ ಇ ಲಿಮಿಟೆಡ್ ತನ್ನ ಕೊರೊನಾ ಲಸಿಕೆಯನ್ನ 2ನೇ ಹಂತದ ವೈದ್ಯಕೀಯ ಪ್ರಯೋಗಗಳನ್ನ ನವೆಂಬರ್ 2020ರ 2ನೇ ವಾರದಲ್ಲಿ ಪ್ರಾರಂಭಿಸಿದೆ ಎಂದು ಲಸಿಕೆ ತಯಾರಕರು ತಿಳಿಸಿದ್ದಾರೆ.
ಇನ್ನು ಮೂರನೇ ಹಂತದ ವೈದ್ಯಕೀಯ ಅಧ್ಯಯನವನ್ನು ಭಾರತ ದೇಶದಾದ್ಯಂತ 15 ಸ್ಥಳಗಳಲ್ಲಿ ನಡೆಸಲಾಗುತ್ತದೆ ಮತ್ತು ಇದು 18 ರಿಂದ 80 ವರ್ಷ ವಯಸ್ಸಿನ ಸುಮಾರು 1,268 ಆರೋಗ್ಯಕರ ವಿಷಯಗಳಲ್ಲಿ ರೋಗದ ವಿರುದ್ಧ ರಕ್ಷಣೆಗಾಗಿ ಬಯೋಜಿಕಲ್ ಇಯ ಸಾರ್ಸ್-ಕೋವಿ-2 ಕೊರೊನಾ ಲಸಿಕೆಯ ಇಮ್ಯುನೊಜೆನಿಸಿಟಿ ಮತ್ತು ಸುರಕ್ಷತೆಯನ್ನ ಮೌಲ್ಯಮಾಪನ ಮಾಡುತ್ತದೆ ಎನ್ನಲಾಗಿದೆ.