ನವದೆಹಲಿ, ಏ.24 (DaijiworldNews/HR): ಕಾಂಗ್ರೆಸ್ ಪಕ್ಷವು ರಾಷ್ಟ್ರೀಯ ಪಂಚಾಯತ್ ರಾಜ್ ದಿನವಾದ ಇಂದು ತನ್ನ ಡಿಜಿಟಲ್ ಮಾಧ್ಯಮ ವೇದಿಕೆಯಾದ 'ಐಎನ್ಸಿ ಟಿ.ವಿ' ಚಾನಲ್ ಆರಂಭಿಸಿದೆ.
ಇಂದು ಸರ್ಕಾರದಿಂದ ದೇಶದಲ್ಲಿ ವಿವಿಧ ಸಂಸ್ಥೆಗಳು ದಾಳಿಗೆ ಒಳಗಾಗುತ್ತಿದ್ದು, ಇದು ಮಾಧ್ಯಮಗಳಲ್ಲಿ ಸರಿಯಾಗಿ ಬಿಂಬಿತವಾಗುತ್ತಿಲ್ಲ ಎಂದು ಪಕ್ಷದ ಮುಖಂಡರೊಬ್ಬರು ಅಭಿಪ್ರಾಯಪಟ್ಟರು.
ಇನ್ನು ಈ ಬಗ್ಗೆ ಐಸಿಸಿ ಕಾರ್ಯದರ್ಶಿ ಪ್ರಣವ್ ಝಾ ಅವರು ಮಾತನಾಡಿ, ಸರ್ಕಾರವು ಪ್ರಸಾರ ಮಾಡಲು ಅವಕಾಶ ನೀಡದ ಸುದ್ದಿಗಳು ಐಎನ್ಸಿ ಟಿ.ವಿಯಲ್ಲಿ ಪ್ರಮುಖವಾಗಿ ಸ್ಥಾನ ಪಡೆಯಲಿದ್ದು, ಈ ಮೂಲಕ ಜನರಿಗೆ ವಾಸ್ತವವಾಗಿ ಏನು ನಡೆಯುತ್ತಿದೆ ಎಂಬುದನ್ನು ತಿಳಿಸಲಾಗುವುದು" ಎಂದರು.
ವರ್ಚುವಲ್ ಸ್ವರೂಪದಲ್ಲಿ ಚಾನಲ್ಗೆ ಚಾಲನೆ ನೀಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮಾತನಾಡಿ, "ಈ ಚಾನಲ್ ಜನರಿಗೆ ಧ್ವನಿಯಾಗಲಿದ್ದು, ಕಡುಬಡವರ ಸಮಸ್ಯೆಗಳತ್ತ ಗಮನಸೆಳೆಯಲಿದೆ" ಎಂದು ಹೇಳಿದ್ದಾರೆ.