ಧಾರವಾಡ, ಎ.24 (DaijiworldNews/PY): "ಜನರು ಕೊರೊನಾ ಬಗ್ಗೆ ಆತಂಕಪಡುವ ಅವಶ್ಯಕತೆ ಇಲ್ಲ. ಆದರೆ, ಜನರು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು" ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
"ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೆ ಅಗತ್ಯವಾದ ವ್ಯಾಕ್ಸಿನ್ ಪೂರೈಕೆ ಮಾಡುತ್ತಿದೆ. ರೆಮ್ಡಿಸಿವರ್ ಅಂತಿಮ ಪರಿಹಾರ ಅಲ್ಲ. ರೆಮ್ಡಿಸಿವರ್ ಕೊರತೆಯಾಗಿದೆ ಎಂದು ಗಾಬರಿ ಸೃಷ್ಟಿ ಮಾಡುವ ಕೆಲಸವಾಗುತ್ತಿದೆ" ಎಂದಿದ್ದಾರೆ.
"ಕೊರೊನಾ ಸೋಂಕಿತರಿಗೆ ಹೆಚ್ಚುವರಿ ಹತ್ತು ಆಂಬ್ಯುಲೆನ್ಸ್ ತಯಾರು ಮಾಡಲಾಗಿದೆ. ಜನರು ಅನಗತ್ಯವಾಗಿ ರಸ್ತೆಯಲ್ಲಿ ಓಡಾಡುವುದು ಬೇಡ. ಜನರು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವುದು ಮುಖ್ಯ" ಎಂದು ಹೇಳಿದ್ದಾರೆ.
"ಕೇಂದ್ರ ಸರ್ಕಾರ, ರಾಜ್ಯದ ಬಗ್ಗೆ ಮುತುವರ್ಜಿ ವಹಿಸಿದೆ. ಆರೋಗ್ಯ ಸಚಿವರು ನಿರಂತರ ಸಂಪರ್ಕದಲ್ಲಿದ್ದಾರೆ. ಆಕ್ಸಿಜನ್ ಸಿಗುವುದಿಲ್ಲ ಎಂದು ಯಾರೂ ಕೂಡಾ ಭಯಪಡಬೇಡಿ" ಎಂದು ತಿಳಿಸಿದ್ದಾರೆ.