ನವದೆಹಲಿ, ಏ.24 (DaijiworldNews/HR): "ದೇಶದಲ್ಲಿ ನೀಡಲಾಗುತ್ತಿರುವ ಎರಡು ಕೊರೊನಾ ಲಸಿಕೆಗಳನ್ನು ಪ್ರತಿ ಡೋಸ್ಗೆ 150 ರೂಪಾಯಿಯ ದರದಲ್ಲೇ ಖರೀದಿಸಲಾಗುವುದು" ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.
ಸಾಂಧರ್ಭಿಕ ಚಿತ್ರ
ಈ ಬಗ್ಗೆ ಆರೋಗ್ಯ ಸಚಿವಾಲಯ ಸ್ಪಷ್ಟನೆ ನೀಡಿದ್ದು, ಕೇಂದ್ರ ಸರ್ಕಾರ ತಾನು ಖರೀದಿಸುವ ಲಸಿಕೆಯ ಬೆಲೆಯಲ್ಲಿ ಬದಲಾವಣೆ ಇರುವುದಿಲ್ಲ ಎಂದು ಹೇಳಿದೆ.
ಕೇಂದ್ರ ಮಾಜಿ ಸಚಿವ, ಕಾಂಗ್ರೆಸ್ ನಾಯಕ ಜಯರಾಮ್ ರಮೇಶ್ ಸುದ್ದಿ ವರದಿಯೊಂದನ್ನು ಆಧರಿಸಿ ಟ್ವೀಟ್ ಮಾಡಿದ್ದು, ಅದರಲ್ಲಿ ಸರ್ಕಾರ 400 ರೂಪಾಯಿ ದರದಲ್ಲಿ ಲಸಿಕೆ ಖರೀದಿಸುವುದನ್ನು ಖಂಡಿಸಿದ್ದರು.
ಈ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿ ಟ್ವೀಟ್ ಮಾಡಿದ್ದು, ಕೇಂದ್ರ ಸರ್ಕಾರ ಮಾತ್ರ 150 ರೂಪಾಯಿ ದರದಲ್ಲೇ ಲಸಿಕೆ ಖರೀದಿ ಮುಂದುವರೆಸಲಿದೆ ಎಂದು ಹೇಳಿದೆ.