ಶ್ರೀನಗರ, ಏ.24 (DaijiworldNews/HR): ಜಮ್ಮು ಮತ್ತು ಕಾಶ್ಮೀರದ ಗಡಿಯೊಳಗೆ ಪ್ರವೇಶಿಸಿದ ಪಾಕ್ ಪಡೆಗಳ ಡ್ರೋನ್ ಒಳನುಗ್ಗುವ ಪ್ರಯತ್ನವನ್ನು ವಿಫಲಗೊಳಿಸಲಾಗಿದೆ ಎಂದು ಬಿಎಸ್ಎಫ್ ವಕ್ತಾರರು ತಿಳಿಸಿದ್ದಾರೆ.
ಶನಿವಾರ ಬೆಳ್ಳಗ್ಗಿನ ಜಾವ ಪಾಕಿಸ್ತಾನದ ಕಡೆಯಿಂದ ಎರಡು ಡ್ರೋನ್ ಗಳು ಪ್ರವೇಶಿಸಿದ್ದು, ತಕ್ಷಣ ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ ನಿಯೋಜಿಸಿದ್ದ ಬಿಎಸ್ಎಫ್ ಯೋಧರು ಗುಂಡು ಹಾರಿಸಿದ್ದು, ಡ್ರೋನ್ ಗಳು, ಯುಎವಿಗಳು ಪಾಕಿಸ್ತಾನದ ಕಡೆಗೆ ಹೋಗುವಂತೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ಪಾಕಿಸ್ತಾನ ಡ್ರೋನ್ಗಳು ಭಾರತದೊಳಗೆ ನುಸುಳದಂತೆ ಬಿಎಸ್ಎಫ್ ತಡೆದಿದ್ದು, ಭಾರತದೊಳಗೆ ಶಸಾಸ್ತ್ರಗಳು, ಮದ್ದು ಗುಂಡುಗಳನ್ನು ಸಾಗಿಸಲು ಪಾಕಿಸ್ತಾನ ಡ್ರೋನ್ಗಳನ್ನು ಬಳಸುತ್ತಿದೆ ಎಂದು ಬಿಎಸ್ಎಫ್ ಗುಪ್ತಚರ ವಿಭಾಗ ಮಾಹಿತಿ ಪಡೆದಿದೆ ಎಂದು ಅವರು ಹೇಳಿದ್ದಾರೆ.