ಗುಹಾವಾಟಿ, ಏ 24 (DaijiworldNews/MS): ಅಸ್ಸಾಂನ ಸರ್ಕಾರಿ ಸ್ವಾಮ್ಯದ ಅಯಿಲ್& ನ್ಯಾಚ್ಯುರಲ್ ಗ್ಯಾಸ್ ಕಾರ್ಪೊರೇಷನ್ ಒಎನ್ಜಿಸಿ ಸಂಸ್ಥೆಯ ತೈಲ ಸಂಸ್ಕರಣಾ ಘಟಕದದಿಂದ ಅಲ್ಫಾ ಉಗ್ರರು ಅಪಹರಿಸಿದ್ದ ಮೂವರು ಉದ್ಯೋಗಿಗಳ ಪೈಕಿ ಇಬ್ಬರನ್ನು ಭದ್ರತಾ ಪಡೆಗಳು ರಕ್ಷಣೆ ಮಾಡಿದೆ.
ನಾಗಾಲ್ಯಾಂಡ್ನ ಸೋಮ ಜಿಲ್ಲೆಯ ಭಾರತ-ಮ್ಯಾನ್ಮಾರ್ ಗಡಿಯ ಬಳಿ ಶನಿವಾರದಂದು ನಿಷೇಧಿತ ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸೋಮ್-ಇಂಡಿಪೆಂಡೆಂಟ್ (ಉಲ್ಫಾ-ಐ) ಸೆರೆಯಲ್ಲಿರುವ ಮೂವರು ನೌಕರರಲ್ಲಿ ಇಬ್ಬರು ಭದ್ರತಾ ಪಡೆಗಳನ್ನು ರಕ್ಷಿಸಿದ್ದು, ಮೂರನೇ ಉದ್ಯೋಗಿಯನ್ನು ರಕ್ಷಿಸಲು ಪ್ರಯತ್ನಗಳು ನಡೆಯುತ್ತಿವೆ ಪೊಲೀಸ್ ಮುಖ್ಯಸ್ಥ ಭಾಸ್ಕರ್ ಜ್ಯೋತಿ ಮಹಂತಾ ಹೇಳಿದ್ದಾರೆ.
ಕಾರ್ಯಾಚರಣೆ ಇನ್ನೂ ಪ್ರಗತಿಯಲ್ಲಿದ್ದು, ಅಲಕೇಶ್ ಸೈಕಿಯಾ ಹಾಗೂ ಮೋಹಿನಿ ಮೋಹನ್ ಗೊಗೋಯ್ ರಕ್ಷಿಸಲ್ಪಟ್ಟ ಉದ್ಯೋಗಿಗಳಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಒಂದು AK 47 ನ್ನು ವಶಕ್ಕೆ ಪಡೆಯಲಾಗಿದೆ ಎಂದು ಭದ್ರತಾ ಪಡೆಗಳು ತಿಳಿಸಿವೆ.
ಕಿರಿಯ ತಂತ್ರಜ್ಞರಾದ ಮೋಹಿನಿ ಮೋಹನ್ ಗೊಗೋಯ್, ರಿತುಲ್ ಸೈಕಿಯಾ ಹಾಗೂ ಜೆಇಎ ಅಲಕೇಶ್ ಸೈಕಿಯಾ ಅಸ್ಸಾಂ ನ ಲಾಕ್ವಾ ಫೀಲ್ಡ್ ನಲ್ಲಿ ರಿಗ್ ಸೈಟ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಉಗ್ರರಿಂದ ಅಪಹರಣಕ್ಕೆ ಒಳಗಾಗಿದ್ದರು. ಮೂವರೂ ಅಸ್ಸಾಂಗೆ ಸೇರಿದವರಾಗಿದ್ದಾರೆ. ಇದಕ್ಕೂ ಮುನ್ನ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಅಸ್ಸಾಂ ಪೊಲೀಸರು, ಉಲ್ಫಾ ಬೆಂಬಲಿಗರೂ ಸೇರಿ 14 ಮಂದಿಯನ್ನು ಬಂಧಿಸಿದ್ದರು