ರಾಯ್ಪುರ, ಎ.24 (DaijiworldNews/PY): ಬಿಜಾಪುರ ಜಿಲ್ಲೆಯ ಪಾಲ್ನಾರ್ನಿಂದ ನಕ್ಸಲರು ಮೂರು ದಿನಗಳ ಹಿಂದೆ ಅಪಹರಿಸಿದ್ದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಓರ್ವರನ್ನು ಹತ್ಯೆಗೈಯಲಾಗಿದೆ.
ಸಾಂದರ್ಭಿಕ ಚಿತ್ರ
"ಎಸ್ಐ ಮುರಳಿ ತಾಟಿ ಅವರು ಎಪ್ರಿಲ್ 21ರಂದು ಪಾಲ್ನಾರ್ನಲ್ಲಿರುವ ತಮ್ಮ ಮನೆಗೆ ಬಂದಿದ್ದು, ಈ ವೇಳೆ ಅವರನ್ನ ನಕ್ಸಲರು ಅಪಹರಿಸಿದ್ದರು" ಎಂದು ಬಿಜಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಮಲೋಚನ್ ಕಶ್ಯಪ್ ಹೇಳಿದ್ದಾರೆ.
ಮುರಳಿ ಅವರನ್ನು ಹತ್ಯೆಗೈದ ಬಳಿಕ ಅವರ ಮೃತದೇಹವನ್ನು ನಕ್ಸಲರು ಗಂಗಲೂರು ಹಳ್ಳಿಯ ಸಮೀಪ ಎಸೆದಿದ್ದಾರೆ. ಮೃತದೇಹದೊಂದಿಗೆ "ಜನತಾ ನ್ಯಾಯಾಲಯದಲ್ಲಿ ತೀರ್ಮಾನಿಸಿದಂತೆ ಪೊಲೀಸ್ ಅಧಿಕಾರಿಗೆ ಶಿಕ್ಷೆ ವಿಧಿಸಲಾಗಿದೆ" ಎಂದು ಬರೆದಿದ್ದಾರೆ.
ಎಪ್ರಿಲ್ ತಿಂಗಳ ಆರಂಭದಲ್ಲಿ ಸುಕ್ಮಾ ಹಾಗೂ ಬಿಜಾಪುರ ಪ್ರದೇಶದಲ್ಲಿ ನಡೆದ ನಕ್ಸಲ್ ದಾಳಿಯಲ್ಲಿ ಸುಮಾರು 22 ಭದ್ರತಾ ಸಿಬ್ಬಂದಿಗಳು ಹುತಾತ್ಮರಾಗಿದ್ದು, 30ಕ್ಕೂ ಅಧಿಕ ಸಿಬ್ಬಂದಿಗಳು ಗಾಯಗೊಂಡಿದ್ದರು.