ತಿರುವನಂತಪುರಂ, ಏ.24 (DaijiworldNews/HR): ಕೊರೊನಾ ಲಸಿಕೆ ಚಾಲೆಂಜ್ಯಲ್ಲಿ ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ನೀಡಿದ ಮೊತ್ತವನ್ನು ಲಸಿಕೆ ಖರೀದಿಗೆ ಮಾತ್ರ ಬಳಸಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಘೋಷಿಸಿದ್ದಾರೆ.
ಲಸಿಕೆ ಸವಾಲು ಅಭಿಯಾನಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು ಶುಕ್ರವಾರ 1 ಕೋಟಿಗಿಂತಲೂ ಹೆಚ್ಚು ಹಣ ದೇಣಿಗೆಯಾಗಿ ಲಭಿಸಿದ್ದು, ಈ ಹಣವನ್ನು ಕಾಯ್ದಿರಿಸಲು ಸಿಎಂಡಿಆರ್ಎಫ್ನಲ್ಲಿ ವಿಶೇಷ ಖಾತೆಯನ್ನು ರಚಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.
ಇನ್ನು ಈಗ ಲಸಿಕೆ ಪಡೆದವರು ಸಿಎಂಡಿಆರ್ಎಫ್ಗೆ ದೇಣಿಗೆ ನೀಡುತ್ತಿದ್ದು, ಪ್ರತಿಯೊಬ್ಬರೂ ಸವಾಲಿನ ಭಾಗವಾಗಲು ಸಿದ್ಧರಾಗಿರಬೇಕು. ನಮ್ಮ ಗುರಿಗಳನ್ನು ಸಾಧಿಸಲು ವ್ಯಕ್ತಿಗಳು ಮಾತ್ರವಲ್ಲದೆ ಸಂಸ್ಥೆಗಳು ಮತ್ತು ಕಚೇರಿಗಳು ಕೈಜೋಡಿಸಬೇಕು" ಎಂದಿದ್ದಾರೆ.
ಕೇಂದ್ರ ಸರಕಾರದ ಲಸಿಕೆ ನೀತಿಯನ್ನು ವಿರೋಧಿಸಿ ಎರಡು ದಿನಗಳ ಹಿಂದೆ ಆರಂಭವಾದ ವಾಕ್ಸಿನ್ ಚಾಲೆಂಜ್ ಇದೀಗ ಕೇರಳದಾದ್ಯಂತ ವಿಶೇಷ ಸ್ವೀಕೃತಿಯನ್ನು ಪಡೆದುಕೊಳ್ಳುತ್ತಿದ್ದು, ರಾಜ್ಯದಲ್ಲಿ ಎಲ್ಲರಿಗೂ ಉಚಿತವಾಗಿ ಲಸಿಕೆಯನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಎರಡು ದಿನಗಳ ಹಿಂದೆ ಘೋಷಿಸಿದ್ದರು.
ಈ ಕುರಿತು ಟ್ವೀಟ್ ಮಾಡಿರುವ ಪಿಣರಾಯಿ ವಿಜಯನ್ , "ಕೇರಳೀಯರೆಲ್ಲ ಸಂಕಷ್ಟ ಬಂದಾಗ ಒಂದಾಗುತ್ತೇವೆ ಎಂಬುದನ್ನು ನಾವು ಮತ್ತೊಮ್ಮೆ ಸಾಬೀತುಪಡಿಸಿದ್ದೆವೆ. ಸಿಎಂಡಿಆರ್ಎಫ್ಗೆ ಪರಿಹಾರ ನಿಧಿಯ ಹಣ ಹರಿದು ಬರುತ್ತಿದೆ, ಧನ್ಯವಾದಗಳು" ಎಂದು ತಿಳಿಸಿದ್ದಾರೆ.