ಹೈದರಾಬಾದ್, ಎ.24 (DaijiworldNews/PY): ಸುಪ್ರೀಂ ಕೋರ್ಟ್ನ 48ನೇ ನ್ಯಾಯಮೂರ್ತಿಯಾಗಿ ಶನಿವಾರ ನ್ಯಾಯಮೂರ್ತಿ ಎನ್.ವಿ ರಮಣ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ರಾಷ್ಟ್ರಪತಿಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಸಿಜೆಐಗೆ ಪ್ರಮಾಣ ವಚನ ಬೋಧಿಸಲಿದ್ದಾರೆ.
ಎಪ್ರಿಲ್ 23ರ ಶುಕ್ರವಾರಕ್ಕೆ ನ್ಯಾಯಮೂರ್ತಿ ಎಸ್.ಐ ಬೊಬ್ಡೆ ಅವರ ಅಧಿಕಾರದ ಅವಧಿ ಮುಕ್ತಯವಾಗಿದೆ. ಹಾಗಾಗಿ ಸಿಜೆಐ ಆಗಿ ಎನ್.ವಿ.ರಮಣ ಅವರು ಅಧಿಕಾರ ಸ್ವೀಕರಿಸುತ್ತಿದ್ದಾರೆ.
ಹಾಲಿ ಸಿಜೆಐ ತಮ್ಮ ಅಧಿಕಾರದ ಅವಧಿ ಇನ್ನೂ ಒಂದು ತಿಂಗಳು ಇರುವಾಗ ಮುಂದಿನ ಸಿಜೆಐ ಹೆಸರನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸುತ್ತಾರೆ. ಅದರ ಪ್ರಕಾರ ಸಿಜೆಐ ಎಸ್.ಐ ಬೊಬ್ಡೆ ಅವರು ಮಾರ್ಚ್ 24ರಂದು ಸುಪ್ರೀಂ ಕೋರ್ಟ್ನ ಅತ್ಯಂತ ಹಿರಿಯ ನ್ಯಾಯಮೂರ್ತಿಯಾಗಿದ್ದ ಎನ್.ವಿ.ರಮಣ ಅವರನ್ನು ಹೆಸರನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದರು.
ಕೇಂದ್ರ ಸರ್ಕಾರದ ನ್ಯಾಯಾಲಯ ವಿಭಾಗವು ಹಾಲಿ ಸಿಜೆಐ ಅವರ ಶಿಫಾರಸ್ಸನ್ನು ಕೇಂದ್ರ ಗೃಹ ಸಚಿವಾಲಯಕ್ಕೆ ಶಿಫಾರಸ್ಸು ಪತ್ರವನ್ನು ಕಳುಹಿಸಿಕೊಟ್ಟಿತ್ತು. ಬಳಿಕ ಶಿಫಾರಸ್ಸು ಪತ್ರವನ್ನು ರಾಷ್ಟ್ರಪತಿ ಕಾರ್ಯಾಲಯಲಕ್ಕೆ ಕಳುಹಿಸಿ ಕೊಡಲಾಗಿತ್ತು. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸಹಿ ಮಾಡಿದ ಬಳಿಕ. ಎಪ್ರಿಲ್ 6ರಂದು ಎನ್.ಎ. ರಮಣ ಅವರನ್ನು ಸುಪ್ರೀಂ ಕೋರ್ಟ್ಗೆ ಮುಂದಿನ ಮುಖ್ಯ ನ್ಯಾಯಮೂರ್ತಿ ಎಂದು ಘೋಷಣೆ ಮಾಡಲಾಗಿತ್ತು.
2022ರ ಆಗಸ್ಟ್ 26ರ ತನಕ ನ್ಯಾಯಮೂರ್ತಿ ಎನ್.ವಿ. ರಮಣ ಅವರು ಸಿಜೆಐ ಆಗಿ ಸೇವೆ ಸಲ್ಲಿಸಲಿದ್ದಾರೆ.