ನವದೆಹಲಿ, ಏ.23 (DaijiworldNews/HR): ಮುಂದಿನ ಮೇ ಮತ್ತು ಜೂನ್ ತಿಂಗಳಿನಲ್ಲಿ ಕೇಂದ್ರ ಸರಕಾರವು ಸುಮಾರು 80 ಕೋಟಿ ಬಡ ಜನರಿಗೆ ಉಚಿತ ಆಹಾರ ಧಾನ್ಯವನ್ನು ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪಿಎಂ ಗರಿಬ್ ಕಲ್ಯಾಣ್ ಯೋಜನೆಯ ಪ್ರಕಾರ ಕೇಂದ್ರ ಸರಕಾರವು 5 ಕೆಜಿ ಉಚಿತ ಆಹಾರ ಧಾನ್ಯವನ್ನು ಫಲಾನುಭವಿಗಳಿಗೆ ನೀಡಲಿದ್ದು, ಇದಕ್ಕಾಗಿ 26,000 ಕೋಟಿ ರೂ. ವ್ಯಯಿಸಲಾಗುತ್ತಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ.
ಇನ್ನು ದೇಶದಾದ್ಯಂತ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಈ ಸಮಯದಲ್ಲಿ ಬಡವರಿಗೆ ಪೌಷ್ಠಿಕಾಂಶ ದೊರೆಯುವುದು ಮುಖ್ಯ ಎಂದು ನರೇಂದ್ರ ಮೋದಿ ಹೇಳಿದ್ದಾರೆ.
ಕಳೆದ ವರ್ಷ ಮಾರ್ಚ್ನಲ್ಲಿ ಪಿಎಂ ಗರಿಬ್ ಕಲ್ಯಾಣ್ ಅನ್ನ್ ಯೋಜನೆಯನ್ನು ಸರಕಾರ ಮೊದಲ ಬಾರಿ ಘೋಷಿಸಿದ್ದು, ಈ ಯೋಜನೆ ಅಡಿಯಲ್ಲಿ ಆರಂಭದಲ್ಲಿಎಪ್ರಿಲ್ ನಿಂದ ಜೂನ್ ವರೆಗೆ ಬಡವರಿಗೆ ಉಚಿತ ಆಹಾರ ಧಾನ್ಯವನ್ನು ಒದಗಿಸಿತ್ತು.