ನವದೆಹಲಿ, ಎ.23 (DaijiworldNews/PY): "ಕೊರೊನಾ ಸೋಂಕು ಚಿಕಿತ್ಸೆಗಾಗಿ ಆಂಟಿವೈರಲ್ ಔಷಧ ವಿರಾಫಿನ್ ಅನ್ನು ಬಳಸಲು ಡಿಸಿಐಜಿ ನಿರ್ಬಂಧಿತ ತುರ್ತು ಬಳಕೆಗೆ ಅನುಮೋದನೆ ನೀಡಿದೆ" ಎಂದು ಝೈಡಸ್ ಕ್ಯಾಡಿಲಾ ಶುಕ್ರವಾರ ಘೋಷಿಸಿದೆ.
"ಕೊರೊನಾ ರೋಗದ ಚಿಕಿತ್ಸೆಯನ್ನು ಆಂಟಿವೈರಲ್ ಔಷಧದ ಒಂದು ಡೋಸ್ ಉಪಕ್ರಮವು ಹೆಚ್ಚು ಅನುಕೂಲಕರವಾಗಿಸುತ್ತದೆ. ಕೊರೊನಾ ಸಮಯದ ಪ್ರಾರಂಭದಲ್ಲಿ ವಿರಾಫಿನ್ ನೀಡಿದರೆ, ರೋಗಿಗಳು ಸೋಂಕಿನಿಂದ ಚೇತರಿಸಿಕೊಳ್ಳು ಹಾಗೂ ಹೆಚ್ಚಿನ ತೊಡಕುಗಳನ್ನು ತಪ್ಪಿಸಲು ನೆರವಾಗುತ್ತದೆ" ಎಂದು ತಿಳಿಸಿದೆ.
"ದೇಶದಾದ್ಯಂತ 20-25 ಕೇಂದ್ರಗಳಲ್ಲಿ ನಡೆಸಬಹುದಾದ ಬಹುಕೇಂದ್ರಿತ ಪ್ರಯೋಗದಲ್ಲಿ ವಿರಾಫಿನ್, ಕೊರೊನಾ ಚಿಕಿತ್ಸೆಯಲ್ಲಿ ಮುಖ್ಯಮಾದ ಸವಾಲುಗಳಾದ ಉಸಿರಾಟದ ತೊಂದರೆ ಹಾಗೂ ವೈಫಲ್ಯವನ್ನು ನಿಯಂತ್ರಿಸುತ್ತದೆ. ಇತರ ವೈರಲ್ ಸೋಂಕುಗಳ ವಿರುದ್ದವೂ ಕೂಡಾ ಈ ಔಷಧ ಪರಿಣಾಮಕಾರಿಯಾಗಿದೆ" ಎಂದು ಕಂಪೆನಿ ತಿಳಿಸಿದೆ.