ಪಾಟ್ನಾ, ಎ.23 (DaijiworldNews/PY): ದೋಣಿಗಳನ್ನು ಸೇರಿದ ಮಾಡಿದ ಸೇತುವೆಯ ಮೇಲಿಂದ ಪಿಕ್ಅಪ್ ಜೀಪು ಗಂಗಾ ನದಿಗೆಉರುಳಿಬಿದ್ದ ಪರಿಣಾಮ 9 ಮಂದಿ ಸಾವನ್ನಪ್ಪಿರುವ ಘಟನೆ ಶುಕ್ರವಾರ ಇಲ್ಲಿನ ದಾನಪುರ ಪ್ರದೇಶದಲ್ಲಿ ನಡೆದಿದೆ.
ದಾನಪುರದ ಚಿತ್ರಕೂಟ ನಗರದಲ್ಲಿನ ವಿವಾಹ ಕಾರ್ಯಕ್ರಮ ಮುಗಿಸಿಕೊಂಡು ಅಖಿಲಪುರಕ್ಕೆ ವಾಪಾಸ್ಸಾಗುತ್ತಿದ್ದ ಸಂದರ್ಭ ಚಾಲಕನ ನಿಯಂತ್ರಣ ತಪ್ಪಿ ವಾಹನ ನದಿಗೆ ಉರುಳಿಬಿದ್ದಿದೆ.
"ವಾಹನದಲ್ಲಿ ಒಟ್ಟು 13 ಮಂದಿ ಇದ್ದರು. ನಾಲ್ಕು ಮಂದಿ ಈಜಿ ದಡ ಸೇರಿದ್ದಾರೆ" ಎಂದು ಜಿಲ್ಲಾಧಿಕಾರಿ ಚಂದ್ರಶೇಖರ್ ಸಿಂಗ್ ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಆಗಮಿಸಿದ ಎನ್ಡಿಆರ್ಎಫ್ ತಂಡ ಪರಿಹಾರ ಕಾರ್ಯಾಚರಣೆ ನಡೆಸುತ್ತಿದೆ.
ಮೃತರ ಕುಟುಂಬಕ್ಕೆ ತಲಾ 4 ಲಕ್ಷ. ರೂ. ಪರಿಹಾರ ಘೋಷಿಸಲಾಗಿದೆ.