ಬೆಂಗಳೂರು, ಏ 23 (DaijiworldNews/MS): ರಾಜ್ಯದಲ್ಲಿ ಆಕ್ಸಿಜನ್ ಇಲ್ಲ, ರೆಮಡಸಿವಿರ್ ಇಲ್ಲ, ಬೆಡ್ ಇಲ್ಲ, ಚಿಕಿತ್ಸೆ ಇಲ್ಲ ಎಲ್ಲೆಲ್ಲೂ ಹಾಹಾಕಾರ. ಜನರ ಪ್ರಾಣ ಹೋಗ್ತಿದೆ, ಇವರದ್ದು ಪ್ರಾಣಾಯಾಮದ ಬಿಟ್ಟಿ ಸಲಹೆ ಎಂದು ಕಾಂಗ್ರೆಸ್ ಆರೋಗ್ಯ ಸಚಿವ ಸುಧಾಕರ್ ಅವರ ವಿರುದ್ದ ಕಿಡಿಕಾರಿದೆ.
ಈ ಬಗ್ಗೆ ರಾಜ್ಯ ಕಾಂಗ್ರೆಸ್ ನಅಧಿಕೃತ ಟ್ವಿಟರ್ ಖಾತೆ ಮೂಲಕ ಟ್ವೀಟ್ ಮಾಡಿದ್ದು , " ರಾಜ್ಯದಲ್ಲಿ ಆಕ್ಸಿಜನ್ ಇಲ್ಲ, ರೆಮಡಸಿವಿರ್ ಇಲ್ಲ, ಬೆಡ್ ಇಲ್ಲ, ಚಿಕಿತ್ಸೆ ಇಲ್ಲ ಎಲ್ಲೆಲ್ಲೂ ಹಾಹಾಕಾರ. ಜನರ ಪ್ರಾಣ ಹೋಗ್ತಿದೆ, ಇವರದ್ದು ಪ್ರಾಣಾಯಾಮದ ಬಿಟ್ಟಿ ಸಲಹೆ , ಆರೋಗ್ಯ ಸಚಿವ ಸುಧಾಕರ್ ಅವರೇ ಪ್ರಾಣಾಯಾಮ ಮಾಡುವುದು ಪ್ರಾಣ ಹೋಗುವ ಸಂದರ್ಭದಲ್ಲಲ್ಲ, ಅದು ದಿನನಿತ್ಯದ ಆರೋಗ್ಯ ಕ್ರಮ ಅಷ್ಟೇ ಪ್ರಾಣ ಉಳಿಸುವ ಯಾವ ಜವಾಬ್ದಾರಿ ನಿರ್ವಹಿಸುತ್ತಿದ್ದೀರಿ ಹೇಳಿ? ಎಂದು ಕಟುವಾಗಿ ಪ್ರಶ್ನಿಸಿದೆ
್ ಕೊರೊನಾ ದೃಢಪಟ್ಟರೆ ಆತಂಕಕ್ಕೊಳಗಾಗುವುದು ಬೇಡ. ಶೇ.90ರಷ್ಟು ಸೋಂಕಿತರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಅಗತ್ಯವಿಲ್ಲ. ಸೋಂಕಿತರು ತಮ್ಮ ಮನೆಯಲ್ಲೇ ಚಿಕಿತ್ಸೆ ಪಡೆಯಬಹುದು. ರಾಜ್ಯದಲ್ಲಿ ರೆಮ್ಡೆಸಿವಿರ್ ಅಗತ್ಯದಷ್ಟು ಪೂರೈಕೆಯಾಗುತ್ತಿದೆ. ಇನ್ನು ದಿನನಿತ್ಯ ಪ್ರಾಣಾಯಾಮ ಮಾಡಿ. ಇದು ಶ್ವಾಸಕೋಶಕ್ಕೆ ಉತ್ತಮ. ರೋಗನಿರೋಧಕ ಶಕ್ತಿ ಹೆಚ್ಚಾದಾಗ ಯಾವ ರೋಗ ಹತ್ತಿರ ಬರುವುದಿಲ್ಲ ಎಂದು ಶುಕ್ರವಾರವಷ್ಟೇ ಆರೋಗ್ಯ ಸಚಿವರು ರಾಜ್ಯದ ಜನತೆಗೆ ಸಲಹೆ ನೀಡಿದ್ದರು.