ಧಾರವಾಡ, ಏ.23 (DaijiworldNews/HR): ಕೊರೊನಾದಿಂದ ಮೃತಪಟ್ಟವರ ಸಂಖ್ಯೆ ಹೆಚ್ಚಾಗುತ್ತಿರುವುದಕ್ಕೆ ಸರ್ಕಾರಗಳ ಚುನಾವಣೆ ಕಾಳಜಿಯೇ ಕಾರಣ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆರೋಪಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಈಗಾಗಲೇ ಶೇ.90ರಷ್ಟು ಲಾಕ್ಡೌನ್ ಮಾಡಿದ್ದಾರೆ, ಜನ ಸಾಮಾನ್ಯರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಪ್ರಕ್ರಿಯೆ ಆಗಬೇಕು. ಎರಡನೇ ಅಲೆ ಬರುತ್ತದೆ ಎಂಬುದು ಮೊದಲೇ ಗೊತ್ತಿತ್ತು, ಆದರೂ ಆಸ್ಪತ್ರೆ, ಆಕ್ಸಿಜನ್, ಬೆಡ್ ವ್ಯವಸ್ಥೆ ಪೂರ್ವ ಸಿದ್ಧತೆ ಮಾಡಿಲ್ಲ. ಹಾಗಾಗಿ ಇದರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ತಪ್ಪು ಎದ್ದು ಕಾಣುತ್ತಿದೆ" ಎಂದರು.
ಇನ್ನು ಒಂದು ಕಡೆ ಚುನಾವಣೆಗಳಲ್ಲಿ ಲಕ್ಷಾಂತರ ಜನ ಸೇರಿಸಿ ರ್ಯಾಲಿ ಮಾಡಿದರು. ಆಗಲೇ ಚುನಾವಣೆಗಳಿಗೆ ತಡೆಯೊಡ್ಡಿ ಕೊರೊನಾ ಕಡೆ ಗಮನ ಕೊಡಬೇಕಿತ್ತು. ಹಾಗೆ ಮಾಡಿದ್ದರೆ ಕೊರೊನಾದಿಂದ ಯಾರೂ ಸಾಯುತ್ತಿರಲಿಲ್ಲ" ಎಂದಿದ್ದಾರೆ.
"ಕೊರೊನಾವನ್ನು ನಿರ್ಲಕ್ಷಿಸಿ, ಚುನಾವಣೆ ಕಡೆ ಗಮನ ಹರಿಸಿರುವುದೇ ಸರ್ಕಾರಕ್ಕೆ ಮುಖ್ಯವಾಗಿದ್ದು, ಜನರ ಸಾವು, ನೋವಿನ ವಿಷಯ ಬೇಡವಾಗಿದೆ" ಎಂದು ಹೇಳಿದ್ದಾರೆ.