ಶ್ರೀನಗರ, ಏ.23 (DaijiworldNews/HR): ಸುಧಾರಿತ ಸ್ಫೋಟಕ ಸಾಧನವೊಂದು ಪತ್ತೆಯಾಗಿದ್ದು, ಸೂಕ್ತ ಸಮಯದಲ್ಲಿ ಅದನ್ನು ನಿಷ್ಕ್ರಿಯಗೊಳಿಸುವ ಮೂಲಕ ಭಾರೀ ಅನಾಹುತವನ್ನು ತಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಈ ಘಟನೆ ಜಮ್ಮು-ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ನಡೆದಿದ್ದು, ಪುಲ್ವಾಮದ ಸರ್ಕಲ್ ರಸ್ತೆಯಲ್ಲಿ ಭದ್ರತಾ ಪಡೆಗೆ ಸುಧಾರಿತ ಸ್ಫೋಟಕ ಸಾಧನವೊಂದು ಸಿಕ್ಕಿದೆ.
ಇನ್ನು ಪತ್ತೆಹಚ್ಚಿದ ಬಳಿಕ ಬಾಂಬ್ ನಿಷ್ಕ್ರಿಯ ದಳದ ಸಹಾಯದಿಂದ ನಾಶಪಡಿಸಲಾಗಿದ್ದು, ಈ ವೇಳೆ ಯಾವುದೇ ಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.