ನವದೆಹಲಿ,ಏ.23 (DaijiworldNews/HR): ದೇಶದಲ್ಲಿ ಕೊರೊನಾ ವೈರಸ್ ಸೋಂಕಿನ ಆರ್ಭಟ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು 10 ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆದಿದ್ದು, ಟಿವಿಯಲ್ಲಿ ನೇರ ಪ್ರಸಾರವಾದ ಸಂವಾದದಲ್ಲಿ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ರಾಜಧಾನಿಯ ಆಸ್ಪತ್ರೆಯಲ್ಲಿನ ಆಮ್ಲಜನಕ ಕೊರತೆಯ ಬಿಕ್ಕಟ್ಟನ್ನು ಎತ್ತಿ ತೋರಿಸಿದರು.
ಇನ್ನು ದಯವಿಟ್ಟು ಸರ್, ನಿಮ್ಮ ಮಾರ್ಗದರ್ಶನ ನಮಗೆ ಬೇಕು. ಪರಿಸ್ಥಿತಿ ನಿಭಾಯಿಸಲು ಕಠಿಣ ಕ್ರಮಕೈಗೊಳ್ಳಿ, ಇಲ್ಲದಿದ್ದರೆ ಪರಿಸ್ಥಿತಿ ಇನ್ನಷ್ಟು ತೀವ್ರವಾಗಬಹುದು. ನಾವು ಜನರನ್ನು ಸಾಯಲು ಬಿಡುವುದಿಲ್ಲ. ಕಠಿಣ ಕ್ರಮ ಕೈಗೊಳ್ಳುವಂತೆ ನಾನು ನಿಮಗೆ ಮನವಿ ಮಾಡುತ್ತೇನೆ. ಇಲ್ಲದಿದ್ದರೆ ದಿಲ್ಲಿಯಲ್ಲಿ ದುರಂತ ಸಂಭವಿಸುತ್ತದೆ ಎಂದರು.
ಇತರ ರಾಜ್ಯಗಳು ದಿಲ್ಲಿಗೆ ಆಕ್ಸಿಜನ್ ಪೂರೈಕೆಯನ್ನು ತಡೆಯುತ್ತಿದ್ದು, ಆಕ್ಸಿಜನ್ ಪೂರೈಕೆಯ ಟ್ರಕ್ ಗಳು ನಿಂತಿರುವ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪ್ರಧಾನಿ ಮೋದಿ ಕರೆ ಮಾಡಬೇಕು ಎಂದು ಕೇಜ್ರಿವಾಲ್ ಹೇಳಿದ್ದಾರೆ.
ದಿಲ್ಲಿಯಲ್ಲಿ ಅಪಾರ ಪ್ರಮಾಣದ ಆಮ್ಲಜನಕದ ಕೊರತೆ ಇದ್ದು, ಇಲ್ಲಿ ಆಮ್ಲಜನಕ ಉತ್ಪಾದಿಸುವ ಸ್ವಾವಿರವಿಲ್ಲದ್ದರಿಂದ ದಿಲ್ಲಿಯ ಜನರಿಗೆ ಆಮ್ಲಜನಕ ಸಿಗುವುದಿಲ್ಲವೇ? ದಿಲ್ಲಿಗೆ ಉದ್ದೇಶಿಸಲಾದ ಆಮ್ಲಜನಕ ಟ್ಯಾಂಕರ್ ಅನ್ನು ಬೇರೆ ರಾಜ್ಯದಲ್ಲಿ ನಿಲ್ಲಿಸಿದಾಗ ನಾನು ಕೇಂದ್ರ ಸರಕಾರದ ಯಾರೊಂದಿಗೆ ಮಾತನಾಡಬೇಕು ಎಂದು ಸೂಚಿಸಿ ಎಂದು ಹೇಳಿದರು.
ಇನ್ನು ಗರಿಷ್ಠ ಪ್ರಮಾಣದ ಟ್ರಕ್ ಗಳು ನಿಂತಿರುವ ರಾಜ್ಯಗಳಿಗೆ ನೀವೆ ದಯಮಾಡಿ ಕರೆ ಮಾಡಬೇಕು. ಆಮ್ಲಜನಕ ದಿಲ್ಲಿ ತಲುಪುವಂತೆ ಮಾಡಬೇಕು ಎಂದು ವಿನಂತಿಸಿದರು. ಬಿಕ್ಕಟ್ಟನ್ನು ಹೋಗಲಾಡಿಸಲು ರಾಷ್ಟ್ರೀಯ ನೀತಿಯನ್ನು ರೂಪಿಸಬೇಕೆಂದು ಆಗ್ರಹಿಸಿದರು.
ಇದೇ ಮೊದಲ ಬಾರಿ ಸಿಎಂ ಅವರೊಂದಿಗೆ ಪ್ರಧಾನಿ ಸಭೆಯ ಖಾಸಗಿ ಸಂಭಾಷಣೆಗಳನ್ನು ನೇರ ಪ್ರಸಾರ ಮಾಡಲಾಗಿದೆ.