ನವದೆಹಲಿ, ಏ 23 (DaijiworldNews/MS): ರಾಜಧಾನಿ ದೆಹಲಿಯಲ್ಲಿ ಕೋವಿಡ್-19 ಸೋಂಕಿತರಿಗೆ ಚಿಕಿತ್ಸೆ ನೀಡಲು ಸರ್ಕಾರ ಹರಸಾಹಸಪಡುತ್ತಿದೆ. ಈ ನಡುವೆ ಗಂಗಾರಾಮ್ ಆಸ್ಪತ್ರೆಯೂ ಆಮ್ಲಜನಕ ವ್ಯವಸ್ಥೆ ಮಾಡಿ ಎಂಬ ಬೇಡಿಕೆ ಇಡುತ್ತಲೇ ಇದೆ. ಆಮ್ಲಜನಕ ಪೂರೈಕೆಯಲ್ಲಿ ಉಂಟಾದ ವ್ಯತ್ಯಯದಿಂದ ಕಳೆದ 24 ಗಂಟೆಗಳಲ್ಲಿ 25 ತೀವ್ರ ಅನಾರೋಗ್ಯಪೀಡಿತ ರೋಗಿಗಳು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮತ್ತೆ ಸರ್ಕಾರಕ್ಕೆ ಎಸ್ಎಎಸ್ ನ್ನು ಕಳುಹಿಸಿರುವ ಆಸ್ಪತ್ರೆ ಇನ್ನು ಕೇವಲ ಎರಡು ಗಂಟೆಗಳವರೆಗೆ ರೋಗಿಗಳಿಗೆ ಆಕ್ಸಿಜನ್ ನೀಡಲು ವ್ಯವಸ್ಥೆಯಿದ್ದು 60 ಮಂದಿ ರೋಗಿಗಳ ಜೀವ ತೀವ್ರ ಅಪಾಯದಲ್ಲಿದೆ ಎಂದು ಹೇಳಿದೆ.
ಈ ಆಸ್ಪತ್ರೆಯಲ್ಲಿ ಸುಮಾರು 500ಕ್ಕೂ ಹೆಚ್ಚು ಕೊರೊನಾ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು , 142 ಮಂದಿ ಅಧಿಕ ಆಕ್ಸಿಜನ್ ನ ಅಗತ್ಯವಿದೆ. ಇದಲ್ಲದೆ ಐಸಿಯುನಲ್ಲಿ ದಾಖಲಾಗಿರುವವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಹರಸಾಹಸ ಮಾಡುತ್ತಿದೆ .ಇದೆಲ್ಲದರ ನಡುವೆ ಆಮ್ಲಜನಕದ ಕೊರತೆ ಮುಖ್ಯವಾಗಿ ಕಾಣುತ್ತಿದೆ. ಕೆಲ ಆಮ್ಲಜನಕ ಸಿಲಿಂಡರ್ ಗಳನ್ನು ಪೂರೈಸಲಾಗಿದೆಯಾದರೂ ಅದು ಅಲ್ಲಿಯೂ ಸಾಕಾಗುತ್ತಿಲ್ಲ ಎಂದು ಮೂಲಗಳು ತಿಳಿಸಿವೆ
ರಾಜಧಾನಿ ದೆಹಲಿ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ತೀವ್ರವಾಗಿ ಕಾಡುತ್ತಿದೆ,ಜನ್, ಬೆಡ್ ಗಳ ಕೊರತೆಯಿದೆ ಎಂದು ಕಳೆದೊಂದು ವಾರದಿಂದ ಸ್ವತಃ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರೆ ಹೇಳುತ್ತಿದ್ದಾರೆ.