ಚಿಕ್ಕಬಳ್ಳಾಪುರ, ಏ.23 (DaijiworldNews/HR): ಚಿಂತಾಮಣಿ ತಾಲೂಕಿನ ಸೋಮಯಾಜಲ ಹಳ್ಳಿಯಲ್ಲಿ ಸಿಡಿಲು ಬಡಿದ ಪರಿಣಾಮ ಮನೆ ಕುಸಿದು 7 ಮಂದಿ ಗಾಯಗೊಂಡ ಘಟನೆ ನಡೆದಿದೆ.
ಸಾಂಧರ್ಭಿಕ ಚಿತ್ರ
ಗಾಯಗೊಂಡವರನ್ನು ಜಗ್ಗಣ್ಣ(60), ಅಂಬರೀಶ್(32), ಗಾಯತ್ರಿ(28), ಗೌತಮ್(3), ವಾಣಿಶ್ರೀ(6), ದರ್ಶನ್(1), ಲಾವಣ್ಯ(4), ಎಂದು ಗುರುತಿಸಲಾಗಿದೆ.
ಗುರುವಾರ ಸಂಜೆಯ ವೇಳೆ ಸುರಿದ ಮಳೆಯ ಪರಿಣಾಮ ಚಪ್ಪಡಿ ಕಲ್ಲಿನ ಮನೆಗೆ ಸಿಡಿಲು ಬಡಿದು ಮನೆ ಕುಸಿದು ಬಿದ್ದು ಈ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಇನ್ನು ಗಾಯಾಳುಗಳನ್ನು ಚಿಂತಾಮಣಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.