ಚಂಡೀಗಢ, ಎ.22 (DaijiworldNews/PY): "ಭಾರತದ ಗಡಿಯೊಳಗೆ ಮೂವರು ಪಾಕಿಸ್ತಾನಿ ನುಸುಳುಕೋರರು ಪ್ರವೇಶಿಸುವುದನ್ನು ಗಡಿ ಭದ್ರತಾ ಪಡೆ ವಿಫಗೊಳಿಸಿದೆ"ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
"ಪಂಜಾಬ್ನ ಪಠಾಣ್ಕೋಟ್ ಜಿಲ್ಲೆಯ ಭಾರತ-ಪಾಕಿಸ್ತಾನ ನಡುವೆ ಇರುವ ಅಂತರಾಷ್ಟ್ರೀಯ ಗಡಿಯಿಂದ ಒಳ ನುಗ್ಗಲು ಪ್ರಯತ್ನಿಸುತ್ತಿದ್ದರು" ಎಂದು ಅಧಿಕಾರಿಗಳು ಹೇಳಿದ್ದಾರೆ.
"ಎಪ್ರಿಲ್ 21ರ ಬುಧವಾರ ರಾತ್ರಿ 10.15ರ ಸುಮಾರಿಗೆ ಮೂವರ ಅನುಮಾನಾಸ್ಪದ ನಡೆ ಗಮನಿಸಿದ ಗಡಿ ಭದ್ರತಾ ಪಡೆಗಳು ಗುಂಡು ಹಾರಿಸಿದ್ದಾರೆ" ಎಂದು ಬಿಎಸ್ಎಫ್ ಅಧಿಕಾರಿಯೋರ್ವರು ತಿಳಿಸಿದ್ದಾರೆ.
"ಈ ಪ್ರದೇಶದಲ್ಲಿ ಬಿಎಸ್ಎಫ್ ಹಾಗೂ ಪಂಜಾಬ್ ಪೊಲೀಸರು ಜಂಟಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ" ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.