ನವದೆಹಲಿ, ಏ.22 (DaijiworldNews/MB) : ದೇಶದಲ್ಲಿ ಮೇ 1 ರಿಂದ 18 ವರ್ಷಕ್ಕಿಂತ ಮೇಲ್ಪಟ್ಟವರೆಲ್ಲರೂ ಲಸಿಕೆ ಪಡೆಯಲು ಅರ್ಹರಾಗಿದ್ದು ಮೊದಲು ಕೊರೊನಾ ಡೋಸ್ ಪಡೆಯಲು ಶನಿವಾರ ಏಪ್ರಿಲ್ 24 ರಂದು ನೋಂದಾಯಿಸಿಕೊಳ್ಳಬೇಕಾಗಿದೆ. ಕೋವಿನ್ ಪ್ಲಾಟ್ಫಾರ್ಮ್ನಲ್ಲಿ ಮುಂದಿನ 48 ಗಂಟೆಗಳಲ್ಲಿ ಈ ನೋಂದಣೆ ಪ್ರಕ್ರಿಯೆ ಆರಂಭವಾಗಲಿದೆ.
ಭಾರತವು ಕೊರೊನಾ ಸೋಂಕು ಪ್ರಕರಣಗಳು ತೀವ್ರ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು ದೈನಂದಿನ ಪ್ರಕರಣಗಳು ಯುಎಸ್ನ ದೈನಂದಿನ ಪ್ರಕರಣಗಳನ್ನು ಮೀರಿಸುತ್ತಿದೆ. ಏತನ್ಮಧ್ಯೆ ಸರ್ಕಾರ ಎಲ್ಲಾ ಎಲ್ಲಾ ವಯಸ್ಕರಿಗೆ ಕೊರೊನಾ ಲಸಿಕೆ ಪಡೆಯಲು ಸೂಚಿಸಿದೆ. ಹಾಗೆಯೇ ಆನ್ಲೈನ್ನಲ್ಲೇ ವ್ಯಾಕ್ಸಿನೇಶನ್ ಡ್ರೈವ್ ನೋಂದಣಿ ಮಾಡಬೇಕಿದೆ.
ಮೇ 1 ರಿಂದ ಲಸಿಕೆ ಪಡೆಯಲು ಬಯಸುವವರು, ಮೊದಲು www.cowin.gov.in ಗೆ ಲಾಗ್ಇನ್ ಆಗಿ ಲಸಿಕೆಗಾಗಿ ನೋಂದಾವಣೆ ಮಾಡಿಕೊಳ್ಳಬೇಕು. ಒಟಿಪಿ ಸ್ವೀಕರಿಸಲು ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ನೋಂದಾಣಿ ಪ್ರಕ್ರಿಯೆ ಪೂರ್ಣಗೊಳಿಸಿ ವೇರಿಫೈ ಬಟನ್ ಕ್ಲಿಕ್ ಮಾಡಬೇಕು. ನೋಂದಣೆ ಆದ ಬಳಿಕ ವ್ಯಾಕ್ಸಿನೇಶನ್ ನೋಂದಣಿ (Registration of vaccination) ಪುಟ ತೆರೆಯುತ್ತದೆ. ಅದರಲ್ಲಿ ಫೋಟೋ ಐಡಿ ಪ್ರೂಫ್ ಸಂಖ್ಯೆ, ಹೆಸರು, ಹುಟ್ಟಿದ ದಿನಾಂಕ, ಲಿಂಗ ಹಾಗೂ ಇತರ ವಿವರಗಳನ್ನು ನಮೂದಿಸಿ ಬಳಿಕ ರಿಜಿಸ್ಟರ್ ಬಟನ್ ಕ್ಲಿಕ್ ಮಾಡಬೇಕು.
ಈ ಬಳಿಕ ಅಗತ್ಯ ಸಂದೇಶಗಳು ನಿಮ್ಮ ಮೊಬೈಲ್ಗೆ ಬರಲಿದೆ. ಲಸಿಕೆಗಾಗಿ ನೋಂದಾವಣಿ ಮಾಡುವ ಸಂದರ್ಭ ಫಲಾನುಭವಿಗಳಿಗೆ ಐಡಿ (Beneficiary Reference ID) ದೊರೆಯಲಿದ್ದು ಇದನ್ನು ಫಲಾನುಭವಿಗಳು ಎಲ್ಲಾದರೂ ಸೇವ್ ಮಾಡಿಟ್ಟುಕೊಳ್ಳಬೇಕು.
ಹೀಗೆ ಮೊದಲ ಲಸಿಕೆ ಪಡೆದ ಬಳಿಕ ಲಸಿಕಾ ಪ್ರಮಾಣ ಪತ್ರವನ್ನು ಕೂಡಾ ಆನ್ಲೈನ್ನಲ್ಲೇ ಪಡೆಯಬಹುದಾಗಿದೆ. ಈ ಪ್ರಮಾಣಪತ್ರದಲ್ಲಿ ವ್ಯಕ್ತಿಯ ಹೆಸರು, ಲಸಿಕೆ ಹೆಸರು, ಆಸ್ಪತ್ರೆಯ ಹೆಸರು ಮೊದಲಾದ ವಿವರ ಇರಲಿದೆ. ಈ ಪ್ರಮಾಣ ಪತ್ರವನ್ನು ಪಡೆಯಬೇಕಾದರೆ Beneficiary Reference ID ಬಹಳ ಮುಖ್ಯವಾದುದು. ಈ ಪ್ರಮಾಣ ಪತ್ರವನ್ನು ಕೋ-ವಿನ್ ಪೋರ್ಟಲ್ (cowin.gov.in) ಆರೋಗ್ಯ ಸೇತು ಅಪ್ಲಿಕೇಶನ್/ಡಿಜಿ-ಲಾಕರ್ ಮೂಲಕ ಡೌನ್ಲೋಡ್ ಮಾಡಬಹುದಾಗಿದೆ.
ಇನ್ನು ಒಂದು ಮೊಬೈಲ್ ಸಂಖ್ಯೆಯಲ್ಲೇ ಮೂರು ಜನರನ್ನು ನೋಂದಣಿ ಮಾಡಬಹುದಾಗಿದೆ. ಇದಕ್ಕಾಗಿ ಇನ್ನಷ್ಟು ಸೇರಿಸಿ (Add more) ಆಯ್ಕೆ ಮಾಡಬೇಕಾಗಿದೆ.
ವೆಬ್ಸೈಟ್ನಲ್ಲಿ ಕಾಣುವ ಕ್ಯಾಲೆಂಡರ್ ಐಕಾನ್ ಕ್ಲಿಕ್ ಮಾಡಿ ಅಥವಾ ನೇರವಾಗಿ ಅಪಾಯಿಂಟ್ಮೆಂಟ್ ಬಟನ್ ಕ್ಲಿಕ್ ಮಾಡಿ. ಬಳಿಕ ವಾಕ್ಸಿನೇಶನ್ನ ಅಪಾಯಿಟ್ಮೆಂಟ್ ಬುಕ್ ಮಾಡುವ ಪುಟಕ್ಕೆ ಕರೆದೊಯ್ಯಲಿದ್ದು ಈ ಪುಟದಲ್ಲಿ ರಾಜ್ಯ, ಜಿಲ್ಲೆ, ಬ್ಲಾಕ್ ಹಾಗೂ ನಿಮ್ಮ ಪಿನ್ಕೋಡ್ ಮೂಲಕ ಆಯ್ಕೆಯ ವ್ಯಾಕ್ಸಿನೇಶನ್ ಕೇಂದ್ರವನ್ನು ಹುಡುಕಿ, ಅಲ್ಲಿ ಕಾಣುವ ಕೇಂದ್ರದ ಹೆಸರನ್ನು ಕ್ಲಿಕ್ ಮಾಡಿದಾಗ ಅದು ಲಭ್ಯವಿರುವ ಸ್ಲಾಟ್ಗಳನ್ನು ತೋರಿಸುತ್ತದೆ. ಬಳಿಕ ಬುಕ್ ಬಟನ್ ಕ್ಲಿಕ್ ಮಾಡಿ, ಅಪಾಯಿಂಟ್ಮೆಂಟ್ ಕನ್ಫರ್ಮೇಶನ್ ಪುಟ ತೆರೆಯುತ್ತದೆ. ಎಲ್ಲ ವಿವರವನ್ನು ಪರಿಶೀಲಿಸಿ ಬಳಿಕ ಕನ್ಫರ್ಮ್ ಬಟನ್ ಕ್ಲಿಕ್ ಮಾಡಿ. ನೀಡಿದ ದಿನಾಂಕದಂದು ಲಸಿಕಾ ಕೇಂದ್ರಕ್ಕೆ ಹೋಗಿ ಲಸಿಕೆ ಪಡೆಯಬಹುದಾಗಿದೆ.