ನವದೆಹಲಿ, ಎ.22 (DaijiworldNews/PY): "ಪ್ರಸ್ತುತ ಪರಿಸ್ಥಿತಿಯಲ್ಲಿ ದೇಶಕ್ಕೆ ಪರಿಹಾರದ ಅಗತ್ಯವಿದೆ ಬದಲಾಗಿ ಟೊಳ್ಳು ಭಾಷಣಗಳಲ್ಲ" ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ನಾನು ಕೊರೊನಾ ಸೋಂಕಿನಿಂದ ಹೋಂ ಕ್ವಾರಂಟೈನ್ನಲ್ಲಿ ಇದ್ದೇನೆ. ದಿನ ಬೆಳಗಾದರೆ ದುಃಖದ ಸುದ್ದಿ ನಿರಂತರವಾಗಿ ಬರುತ್ತಿವೆ" ಎಂದಿದ್ದಾರೆ.
"ದೇಶದಲ್ಲಿನ ಬಿಕ್ಕಟ್ಟಿಗೆ ಕೇವಲ ಕೊರೊನಾ ಕಾರಣ ಅಲ್ಲ. ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳೂ ಕೂಡಾ ಕಾರಣ. ಸುಳ್ಳು ಲಸಿಕಾ ಆಚರಣೆಗಳು, ಟೊಳ್ಳು ಭಾಷಣಗಳ ಅಗತ್ಯವಿಲ್ಲ. ಬದಲಾಗಿ ದೇಶದ ಜನರ ಸಮಸ್ಯೆಗೆ ಸೂಕ್ತವಾದ ಪರಿಹಾರ ನೀಡಿ" ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಅವರು ಬುಧವಾರ ದೇಶವನ್ನುದ್ದೇಶಿಸಿ ಭಾಷಣ ಮಾಡಿದ್ದರು. ಪ್ರಧಾನಿ ಮೋದಿ ಅವರ ಭಾಷಣದಲ್ಲಿ ಮಹತ್ವದ ಘೋಷಣೆ ಆಗಬಹುದು ಎನ್ನುವ ನಿರೀಕ್ಷೆಗಳಿದ್ದವು, ಆದರೆ. ಏನೂ ಆಗದ ಕಾರಣ, ರಾಹುಲ್ ಗಾಂಧಿ ಭಾಷಣವನ್ನು ಟೊಳ್ಳು ಭಾಷಣೆ ಎಂದಿದ್ದಾರೆ.
ರಾಹುಲ್ ಗಾಂಧಿ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಅವರು ಸದ್ಯ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ.