ಬೆಂಗಳೂರು, ಎ.22 (DaijiworldNews/PY): ಸ್ಯಾಂಪಲ್ಗಳನ್ನು ಸಂಗ್ರಹಿಸಿದ 24 ಗಂಟೆಗಳ ಒಳಗೆ ಆರ್ಟಿಪಿಸಿಆರ್ ಪರೀಕ್ಷಾ ಫಲಿತಾಂಶಗಳನ್ನು ನೀಡುವಂತೆ ರಾಜ್ಯ ಸರ್ಕಾರ ಲ್ಯಾಬ್ಗಳಿಗೆ ಹಾಗೂ ಪರೀಕ್ಷಾ ಸಂಸ್ಥೆಗಳಿಗೆ ನಿರ್ದೇಶನ ನೀಡಿದೆ.
ಸಾಂದರ್ಭಿಕ ಚಿತ್ರ
"ಆರ್ಟಿಪಿಸಿಆರ್ ಪರೀಕ್ಷಾ ಫಲಿತಾಂಶಗಳನ್ನು 24 ಗಂಟೆಗಳ ಒಳಗೆ ನೀಡುವುದರ ಜೊತೆಗೆ ಮಾಹಿತಿಯನ್ನು ಐಸಿಎಂಆರ್ ಪೋರ್ಟಲ್ನಲ್ಲಿಯೂ ನಮೂದಿಸಬೇಕು" ಎಂದು ಆದೇಶ ನೀಡಿತ್ತು.
"ಪರೀಕ್ಷಾ ವರದಿಗಳನ್ನು ಪಡೆಯುವಲ್ಲಿ ವಿಳಂಬವಾಗುತ್ತಿದೆ ಎನ್ನುವ ದೂರುಗಳಯ ಕೇಳಿಬಂದ ಹಿನ್ನೆಲೆ ಹೈಕೋರ್ಟ್ ಈ ನಿದೇರ್ಶನ ನೀಡಿತ್ತು" ಎಂದು ಮೂಲಗಳು ಹೇಳಿವೆ.
ಹೈಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ ಸರ್ಕಾರದ ಮುಖ್ಯ ಕಾರ್ಯದರ್ಶಿ ಜಾವೈದ್ ಅಖ್ತರ್ ಅವರು ಎಲ್ಲಾ ಪ್ರಯೋಗಾಲಯಗಳು ಹಾಗೂ ಪರೀಕ್ಷಾ ಸಂಸ್ಥೆಗಳಿಗೆ ಸೂಚನೆ ನೀಡಿದ್ದು, "ಮಾದರಿ ಸಂಗ್ರಹಿಸಿದ 24 ಗಂಟೆಗಳಲ್ಲಿ ಆರ್ಟಿಪಿಸಿಆರ್ ವರದಿ ನೀಡಬೇಕು" ಎಂದು ತಿಳಿಸಿದ್ದಾರೆ.