ನವದೆಹಲಿ, ಏ 22 (DaijiworldNews/MS): ಭಾರತದಲ್ಲಿ ಡಬಲ್ ಮ್ಯುಟೆಂಟ್ ಕೋವಿಡ್ ಪ್ರಕರಣವು ಏಕಾಏಕಿ ಉಲ್ಬಣಕ್ಕೆ ಸಾಕ್ಷಿಯಾಗಿ 2ನೇ ಅಲೆ ಬಲವಾಗುತ್ತಿರುವ, ಹೊಸ "ಟ್ರಿಪಲ್ ಮ್ಯುಟೆಂಟ್ " ರೂಪಾಂತರಿ ಮತ್ತಷ್ಟು ಅಪಾಯ ತಂದೊಡ್ಡುವ ಸೂಚನೆ ನೀಡುತ್ತಿದೆ.
ಈ ಹೊಸ ಮಾದರಿಯ ವೈರಾಣುವಿನಲ್ಲಿ ‘ಇ484ಕೆ’ ಎಂಬ ಬದಲಾವಣೆ ಇದೆ. ಬ್ರೆಜಿಲ್ ಹಾಗೂ ದಕ್ಷಿಣ ಆಫ್ರಿಕಾ ರೂಪಾಂತರಿ ಕೊರೋನಾದಲ್ಲೂ ಇದೇ ಬದಲಾವಣೆ ಕಾಣಿಸಿಕೊಂಡಿತ್ತು. ಲಸಿಕೆಯಿಂದ ದೇಹ ಉತ್ಪಾದಿಸುವ ಅಥವಾ ಹಿಂದೆ ಕಾಣಿಸಿಕೊಂಡ ಸೋಂಕಿನಿಂದ ವೃದ್ಧಿಯಾಗಿರುವ ಪ್ರತಿಕಾಯ ಶಕ್ತಿಗೆ ಪ್ರತಿರೋಧ ತೋರುವ ಗುಣಲಕ್ಷಣಗಳ ಜತೆ ಇದು ನಂಟು ಹೊಂದಿದೆ.
ಏನೀದು ಟ್ರಿಪಲ್ ಮ್ಯುಟೇಶನ್ ?
ಮೂರು ಬಗೆಯ ಕೊರೊನಾ ವೈರಾಣುಗಳಲ್ಲಿರುವ ಡಿಎನ್ಎ ಗಳಲ್ಲಿನ ಅಂಶಗಳು ಸಮ್ಮಿಲನಗೊಂಡು ಒಂದೇ ವೈರಾಣುವಾಗಿ ರೂಪುಗೊಂಡಿರುವಂಥದ್ದು ಎಂದರ್ಥ
ಭಾರತದಲ್ಲಿ ಟ್ರಿಪಲ್ ಮ್ಯುಟೇಶನ್ ಪತ್ತೆಯಾಗಿರುವ ಸ್ಥಳ:
ಭಾರತದಲ್ಲಿ ಟ್ರಿಪಲ್ ಮ್ಯುಟೇಶನ್ ನವದೆಹಲಿ, ಮಹಾರಾಷ್ಟ್ರ, ಪಶ್ಚಿಮ ಬಂಗಾಳದಲ್ಲಿ ಇವು ಪತ್ತೆಯಾಗಿದೆ. ಭಾರತ ಮಾತ್ರವಲ್ಲ ಇಡೀ ವಿಶ್ವದಲ್ಲಿ ಈ ಬಗ್ಗೆ ವೈರಾಣು ಕಾಣಸಿಕ್ಕಿದೆ ಎಂದು ತಜ್ಞರು ತಿಳಿಸಿದ್ದಾರೆ.