ನವದೆಹಲಿ, ಏ 22 (DaijiworldNews/MS): ಸಿಪಿಐ (ಎಂ) ಪಕ್ಷದ ಹಿರಿಯ ಮುಖಂಡ ಸೀತಾರಾಮ ಯೆಚೂರಿ ಅವರ ಪುತ್ರ ಆಶಿಶ್ ಯೆಚೂರಿ ಅವರನ್ನು ಕೊರೊನಾ ಬಲಿ ಪಡೆದಿದೆ. ಗುರುಗ್ರಾಮದ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಮುಂಜಾನೆ 6 ಗಂಟೆಗೆ ನಿಧನರಾಗಿದ್ದಾರೆ.
ಕೊರೊನಾವೈರಸ್ ಸೋಂಕಿಗೆ ತುತ್ತಾಗಿದ್ದ ಅವರು ಗುರುಗ್ರಾಮದ ಮೆಡಂತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದಕ್ಕೂ ಮೊದಲು ಎರಡು ವಾರಗಳ ಹಿಂದೆ ಅವರನ್ನು ಹೋಲಿ ಫ್ಯಾಮಿಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಅವರನ್ನು ಗುರುಗ್ರಾಮ್ಗೆ ಸ್ಥಳಾಂತರಿಸಲಾಯಿತು.
34 ವರ್ಷದ ಆಶಿಶ್ ಹಿರಿಯ ಸಂಪಾದಕರಾಗಿದ್ದು, ನವದೆಹಲಿಯ ಪ್ರಮುಖ ಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು.